ನವದೆಹಲಿ: ಭಾರತ ಸ್ಟಾರ್ ಬಾಕ್ಸರ್, ವೃತ್ತಿಪರ ಆಟಗಾರ ವಿಜೇಂದರ್ ಸಿಂಗ್ ಅವರು ಶನಿವಾರ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕೇರ್ರಿ ಹೋಪ್ ಅವರನ್ನು 10 ರೌಂಡ್ಗಳಲ್ಲಿ ಸೋಲಿಸಿ ಡಬ್ಲ್ಯೂಬಿಓ ಏಷ್ಯಾ/ಪೆಸಿಫಿಕ್ ಮಿಡ್ಲ್ವೇಟ್ ಟೈಟಲ್ನ್ನು ಜಯಿಸಿ ಸಂಭ್ರಮಿಸಿದರು.
ಗೆಲುವಿನ ಬಳಿಕ ಅತ್ಯಂತ ಭಾವುಕರಾದ ವಿಜೇಂದರ್ ತಮ್ಮ ಟೈಟಲ್ನ್ನು ಇತ್ತೀಚಿಗೆ ಮರಣ ಹೊಂದಿದ ಜಗತ್ತು ಕಂಡ ಶ್ರೇಷ್ಠ ಬಾಕ್ಸಿಂಕ್ ಪಟು ಮೊಹಮ್ಮದ್ ಅಲಿಗೆ ಸಮರ್ಪಣೆ ಮಾಡಿದರು.
ತನಗೆ ಬೆಂಬಲ ನೀಡಲು ಆಗಮಿಸಿದ ದೊಡ್ಡ ಜನಸಮೂಹಕ್ಕೆ ಧನ್ಯವಾದ ಸಮರ್ಪಣೆ ಮಾಡಿದ ಅವರು, ಈ ಜಯ ದೇಶಕ್ಕೆ ಧಕ್ಕಿದ ಜಯ ಎಂದರು.
ಸಿಕ್ಸ್ ನೌಕೌಟ್ ವಿನ್ಗಳ ಬಳಿಕ ವಿಜೇಂದರ್ ಅವರಿಗೆ ಸಿಕ್ಕ ಮೊದಲ ಪಾಯಿಂಟ್ ವಿನ್ ಇದಾಗಿದೆ, ಇದೇ ಮೊದಲ ಬಾರಿಗೆ ಅವರು ಸುಧೀರ್ಘ ಸಮಯವನ್ನು ರಿಂಗ್ನೊಳಗೆ ಕಳೆದಿದ್ದಾರೆ.
ಇಲ್ಲೂ ನೌಕೌಟ್ಗೆ ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ, ಗೆಲುವು ಯಾವುತ್ತು ಗೆಲುವೇ ಎಂದು ವಿಜೇಂದರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.