ನವದೆಹಲಿ : ಫ್ರಾನ್ಸ್ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ಸಭೆ ನಡೆಸಲಿದ್ದಾರೆ.
ಧಾರ್ಮಿಕ ಉಗ್ರವಾದ ಮತ್ತು ಪಾಕಿಸ್ಥಾನ ಪ್ರಾಯೋಜಿತ ಉಗ್ರವಾದ ಈ ಸಭೆಯ ಮುಖ್ಯ ಚರ್ಚಾ ವಿಷಯವಾಗಲಿದೆ.
ಉಗ್ರವಾದವನ್ನು ಎದುರಿಸಲು ರಾಜ್ಯಗಳ ಪೊಲೀಸರು ಎದುರಿಸುತ್ತಿರುವ ತಾಂತ್ರಿಕ ಅನಾನುಕೂಲತೆ, ಸೈಬರ್ ಸ್ಪೇಸ್ ಲಿಮಿಟೇಷನ್ಗಳು, ಆಧುನಿಕ ಶಸ್ತ್ರಾಸ್ತ್ರಗಳ ಕೊರತೆ, ಪೊಲೀಸರು ಎದುರಿಸಬೇಕಾದ ಸವಾಲುಗಳು ಈ ಸಭೆಯಲ್ಲಿ ಮುಖ್ಯವಾಗಿ ಚರ್ಚಿತವಾಗಲಿವೆ.
11 ನೇ ಇಂಟರ್ಸ್ಟೇಟ್ ಕೌನ್ಸಿಲ್ ಮೀಟಿಂಗ್ ರಾಷ್ಟ್ರಪತಿ ಭವನದಲ್ಲಿ ನಡೆಯಲಿದ್ದು ಗುಪ್ತಚರ ಹಂಚಿಕೆ, ಉಗ್ರವಾದ ಹತ್ತಿಕ್ಕುವಲ್ಲಿ ಸಹಕಾರ, ಅಸ್ಥಿರತೆ, ಪೊಲೀಸ್ ಸುಧಾರಣೆ, ಆಧುನೀಕರಣದ ಬಗ್ಗೆ ಸಮಾಲೋಚನೆ ನಡೆಯಲಿದೆ.
ಪಾಕಿಸ್ಥಾನದ ಐಎಸ್ಐ ಭಾರತದಲ್ಲಿ ಉಗ್ರವಾದವನ್ನು ಪ್ರಚುರಪಡಿಸುತ್ತಿದೆ. ಲಷ್ಕರ್, ಮುಜಾಹಿದ್ದೀನ್ನಂತಹ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪವನ್ನು ಭಾರತ ಹಿಂದಿನಿಂದಲೂ ಮಾಡುತ್ತಲೇ ಬಂದಿದೆ.
ಈ ವರ್ಷ ಗಡಿಯಲ್ಲಿ ಒಟ್ಟು 56 ಒಳನುಸುಳುವಿಕೆಗಳು ನಡೆದಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 12 ಭಯೋತ್ಪಾದನಾ ಕ್ಯಾಂಪ್ಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.