ನವದೆಹಲಿ: ಇಂದು ವಿಶ್ವ ಯುವ ಕೌಶಲ್ಯ ದಿನ.
ಶಿಕ್ಷಿತ ಯುವ ಸಮುದಾಯಕ್ಕೆ ನೌಕರಿ ಸಿಗಲು ಬೇಕಾದ ಕೌಶಲ್ಯದ ತರಬೇತಿ ನೀಡುವುದು ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುವುದು ಸ್ಕಿಲ್ ಇಂಡಿಯಾದ ಮೂಲಮಂತ್ರವಾಗಿದೆ.
ಎಲ್ಲಾ ವಲಯಗಳು ಮತ್ತು ರಾಜ್ಯಗಳಲ್ಲಿ ಕೌಶಲ್ಯ ತರಬೇತಿ ಚಟುವಟಿಕೆಗಳನ್ನು ರಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 15, 2015ರಂದು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದ್ದರು.
ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಜುಲೈ 15, 2016 ರಂದು ‘ಇಂಡಿಯಾ ಸ್ಕಿಲ್ಸ್’ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯ ಮೊದಲ ಆವೃತ್ತಿಯ ನೇರ ಪ್ರಸಾರವನ್ನು ಭಾರತದ ಟಿವಿ ಪ್ರಸಾರಕ ದೂರದರ್ಶನ ಮಾಡಲಿದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ‘ಇಂಡಿಯಾ ಸ್ಕಿಲ್ಸ್ ಸ್ಪರ್ಧೆ’ಯ ಮೊದಲ ಆವೃತ್ತಿಯನ್ನು ಉದ್ಘಾಟಿಸಲಿದ್ದು, ಡಿಡಿ ನ್ಯಾಶನಲ್, ಡಿಡಿ ಉರ್ದು ಹಾಗೂ ಡಿಡಿ ಇಂಡಿಯಾ ಟುಡೇ ಸಂಜೆ 6 ರಿಂದ 7.30 ರ ವರೆಗೆ ಕಾರ್ಯಕ್ರಮದ ನೇರ ಪ್ರಸಾರ ಮಾಡಲಿವೆ.
ಸ್ಕಿಲ್ ಇಂಡಿಯಾ ಸ್ಪರ್ಧೆಯ ಪ್ರಮುಖ ಸ್ಪರ್ಧೆಗಳು ಜುಲೈ 16 ಮತ್ತು 17 ರಂದು ಬೆಳಗ್ಗೆ 10 ರಿಂದ 5 ರ ವರೆಗೆ ಪ್ರಗತಿ ಮೈದಾನದಲ್ಲಿ ನಡೆಯಲಿವೆ.
ಸಚಿವಾಲಯವು ದೊಡ್ಡ ಪ್ರಮಾಣದಲ್ಲಿ ವೇಗ ಮತ್ತು ಹೆಚ್ಚಿನ ಗುಣಮಟ್ಟದ ಕೌಶಲ್ಯ ತರಬೇತಿ ನೀಡುವ ಮೂಲಕ ಯುವಕರನ್ನು ಸಂಪೂರ್ಣ ನುರಿತರನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.