ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಬುರ್ಹಾನ್ ವಾನಿ ಹತ್ಯೆ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಉಂಟಾಗಿದ್ದು, ಪಾಕಿಸ್ಥಾನ ಈ ಪ್ರದೇಶದಲ್ಲಿ ಅಶಾಂತಿ ಮೂಡಿಸುತ್ತಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ.
ಇಂಡಿಯಾ ಟುಡೇ ವರದಿಗಳ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಅಶಾಂತಿ, ಅವ್ಯವಸ್ಥೆ ಹುಟ್ಟು ಹಾಕಲು ಪಾಕಿಸ್ಥಾನದಿಂದ ಕಾಶ್ಮೀರಕ್ಕೆ ಹವಾಲಾ ಮೂಲಕ 100 ಕೋಟಿ ರೂ. ಕಳುಹಿಸಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ವರದಿ ತಿಳಿಸಿರುವುದಾಗಿ ಹೇಳಿದೆ.
ಈ ಕೋಟ್ಯಾಂತರ ಹಣದ ನಿಧಿ ನೇರವಾಗಿ ಪ್ರತ್ಯೇಕತಾವಾದಿಗಳ ಕೈಸೇರುತ್ತಿದ್ದು, ಭಾರತದ ಭದ್ರತಾ ಪಡೆಗಳ ವಿರುದ್ಧದ ಪ್ರತಿಭಟನಾ ಮೆರವಣಿಗೆಗಳಲ್ಲಿ ಭಾಗವಹಿಸಲು ಯುವಕರಿಗೆ ನಿಧಿಯನ್ನು ಹಂಚಲಾಗುತ್ತದೆ.
ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆಸಲೂ ಹಣ ಹಂಚಲಾಗುತ್ತಿದ್ದು, ಪ್ರತಿಭಟನೆಯಲ್ಲಿ ಪೊಲೀಸರು ಹಾಗೂ ಅರೆಸೈನಿಕ ದಳವನ್ನು ಗುರಿಯಾಗಿಸಲು ಉಗ್ರರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗುತ್ತಿದೆ.
ಗುಪ್ತಚರ ಇಲಾಖೆ ವರದಿಗಳ ಪ್ರಕಾರ ಹಿಜ್ಬುಲ್ ಮುಖ್ಯಸ್ಥ ಸಲಾಹುದ್ದೀನ್ ಹಾಗೂ ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಸ್ ಸಯೀದ್ ಸಂಪರ್ಕದೊಂದಿಗೆ ಪಾಕಿಸ್ಥಾನದ ಐಎಸ್ಐ ನಿಧಿ ವರ್ಗಾವಣೆ ಮಾಡುತ್ತಿದೆ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.