ನವದೆಹಲಿ: ಭಾರತ ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್ (ಎನ್ಎಸ್ಜಿ)ಗೆ ಸದಸ್ಯತ್ವ ಪಡೆಯಲು ನಡೆಸುತ್ತಿರುವ ಪ್ರಯತ್ನದ ಬಗ್ಗೆ ಚರ್ಚೆ ನಡೆಸಲು ಹಾಗೂ ಪರಿಹಾರ ಕಂಡುಕೊಳ್ಳಲು ತಾನು ಸಿದ್ಧವಿರುವುದಾಗಿ ಚೀನಾ ಸುಳಿವು ನೀಡಿದೆ.
ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್ (ಎನ್ಎಸ್ಜಿ)ಗೆ ಭಾರತದ ಸದಸ್ಯತ್ವದಲ್ಲಿ ಚೀನಾದಿಂದ ಹಲವು ಏರುಪೇರುಗಳು ಸಂಭವಿಸಿದೆ.
ಭಾರತದ ಸದಸ್ಯತ್ವಕ್ಕೆ ಚೀನಾ ಅಡ್ಡಿ ಉಂಟುಮಾಡಿದ್ದು, ಇದೀಗ ಈ ವಿಚಾರವನ್ನು ಪರಿಹರಿಸಲು ಚೀನಾ ಸಿದ್ಧವಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಲ್ಯೂ ಜಿನ್ಸಾಂಗ್ ಸುಳಿವು ನೀಡಿದ್ದಾರೆ.
ಒಂದು ದೇಶ ಭಾರತ ಎನ್ಎಸ್ಜಿ ಸದಸ್ಯತ್ವ ಪಡೆಯುವುದಕ್ಕೆ ತೀವ್ರ ತಡೆಯೊಡ್ಡುತ್ತಿದೆ ಎಂದು ಭಾರತ ಚೀನಾದ ಹೆಸರನ್ನು ಹೇಳದೆಯೇ ಆರೋಪ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಚೀನಾದಿಂದ ಈ ಬೆಳವಣಿಗೆ ನಡೆದಿದೆ.
ಎನ್ಎಸ್ಜಿ ಸದಸ್ಯತ್ವಕ್ಕೆ ಅಡ್ಡಿಪಡಿಸುತ್ತಿರುವ ರಾಷ್ಟ್ರವನ್ನು ಭಾರತ ಹೆಸರಿಸಿಲ್ಲ. ಆದ್ದರಿಂದ ಅದು ಚೀನಾ ಎಂದು ಹೇಳಲು ಸಾಧ್ಯವಿಲ್ಲ. ನಿಯಮಗಳ ಪಾಲನೆ, ಸಂಧಾನದ ಮೂಲಕ ಪರಿಹಾರಕ್ಕೆ ಎಲ್ಲ ಅವಕಾಶ ಒದಗಿಸಲು ಚೀನಾ ಸಿದ್ಧವಿದೆ ಎಂದು ಲ್ಯೂ ಜಿನ್ಸಾಂಗ್ ಹೇಳಿದ್ದಾರೆ.
ಭಾರತದ ಎಂಟಿಸಿಆರ್ ಸದಸ್ಯತ್ವವನ್ನು ಸ್ವಾಗತಿಸಿದ ಲ್ಯೂ, ಚೀನಾದ ಎಂಟಿಸಿಆರ್ ಸದಸ್ಯತ್ವ ಮತ್ತು ಭಾರತದ ಎನ್ಎಸ್ಜಿ ಸದಸ್ಯತ್ವಕ್ಕೆ ಪರ-ವಿರೋಧಗಳನ್ನು ನಿರಾಕರಿಸಿದ್ದಾರೆ.
ಭಾರತದಂತೆ ಚೀನಾ ಕೂಡ ಒಂದು ಶಾಂತಿಪ್ರಿಯ ರಾಷ್ಟ್ರವಾಗಿದೆ. ಆದರೆ ರಾಷ್ಟ್ರದ ರಕ್ಷಣೆಗೆ ಚೀನಾದ ಸಾಮರ್ಥ್ಯದ ಬೆಳವಣಿಗೆಯಲ್ಲಿ ಭಾರತ ಕಾಳಜಿ ವಹಿಸುವ ಅಗತ್ಯವಿಲ್ಲ ಎಂದು ಲ್ಯೂ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.