ನವದೆಹಲಿ: ಇ-ವೀಸಾ ಯೋಜನೆ ಪ್ರವಾಸೋದ್ಯಮ ಇಲಾಖೆಗೆ ಬುನಾದಿಯಾಗಿದ್ದು, ಪ್ರವಾಸೋದ್ಯಮ ಸಚಿವಾಲಯ ಇಟಲಿ, ಸೌದಿ ಅರೇಬಿಯಾ, ಮೊರೊಕ್ಕೊ ಸೇರಿದಂತೆ 36 ಹೆಚ್ಚುವರಿ ರಾಷ್ಟ್ರಗಳಿಗೆ ಇ-ವೀಸಾ ಸೌಲಭ್ಯ ವಿಸ್ತರಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ಕೇಳಿಕೊಂಡಿದೆ.
ಪ್ರವಾಸೋದ್ಯಮದ ದೃಷ್ಟಿಯಿಂದ 36 ರಾಷ್ಟ್ರಗಳ ಜನತೆಗೆ ಇ-ವೀಸಾ ಒದಗಿಸಲು ಗೃಹ ಸಚಿವಾಲಯಕ್ಕೆ ಕೋರಲಾಗಿದೆ. ಗೃಹ ಸಚಿವಾಲಯ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದು, ಶೀಘ್ರದಲ್ಲೇ ಈ ರಾಷ್ಟ್ರಗಳಿಗೆ ಸೌಲಭ್ಯ ಒದಗಿಸುವ ಬಗ್ಗೆ ಭರವಸೆ ನೀಡಿದೆ ಎಂದು ಪ್ರವಾಸೋದ್ಯಮ ಸಚಿವಾಲಯದ ಕಾರ್ಯದರ್ಶಿ ವಿನೋದ್ ಝುಷಿ ಹೇಳಿದ್ದಾರೆ.
ಇ-ವೀಸಾ ಯೋಜನೆಯನ್ನು ನವೆಂಬರ್ 2014 ರಲ್ಲಿ ಆರಂಭಿಸಲಾಗಿದ್ದು, 113 ರಾಷ್ಟ್ರಗಳಿಗೆ ಸೌಲಭ್ಯ ಒದಗಿಸಲಾಗಿತ್ತು. ಇದನ್ನು ನಂತರ ಹೆಚ್ಚುವರಿ 37 ರಾಷ್ಟ್ರಗಳಿಗೆ ವಿಸ್ತರಿಸಲಾಗಿತ್ತು.
ಈ ಯೋಜನೆಗೆ ಅತೀ ದೊಡ್ಡ ಪ್ರಮಾಣದಲ್ಲಿ ಪ್ರತಿಕ್ರಿಯೆ ಪಡೆಯಲಾಗಿದ್ದು, ಈ ವರ್ಷ ಜನವರಿಯಿಂದ ಜೂನ್ ತಿಂಗಳ ನಡುವೆ 4.71 ಲಕ್ಷ ಪ್ರವಾಸಿಗರು ಇದರ ಲಾಭ ಪಡೆಯುತ್ತಿದ್ದಾರೆ. ಕಳೆದ ವರ್ಷ 1.26 ಲಕ್ಷ ಪ್ರವಾಸಿಗರು ಈ ಸೌಲಭ್ಯ ಪಡೆದಿದ್ದರು.
ಇ-ವೀಸಾ ಯೋಜನೆಯಡಿ ಅರ್ಜಿದಾರರು ಭಾರತಕ್ಕೆ ಪ್ರವಾಸ ಕೈಗೊಳ್ಳಬಹುದಾದ ಪ್ರಮಾಣಪತ್ರವನ್ನು ಇ-ಮೇಲ್ ಮೂಲಕ ಪಡೆಯಲಿದ್ದು, ಇದರ ಮುದ್ರಿತ ಪತ್ರದ ಸಹಾಯದಿಂದ ಪ್ರವಾಸ ಕೈಗೊಳ್ಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.