ತಿರುವನಂತಪುರಂ : ವಿಶ್ವದಲ್ಲೇ ಮೊದಲ ಬಾರಿಗೆ ಕೇರಳ ರಾಜ್ಯ ಸ್ಟೂಡೆಂಟ್ ಸ್ಟಾರ್ಟ್ಅಪ್ಗಾಗಿ ಆನ್ಲೈನ್ ಇನ್ಕ್ಯುಬೇಟರ್ಗೆ ಚಾಲನೆ ನೀಡಿದೆ.
ಈ ಆನ್ಲೈನ್ ಇನ್ಕ್ಯುಬೇಟರ್ ಅನ್ನು SV.CO ಎಂದು ಕರೆಯಲಾಗಿದ್ದು ಕಾಲೇಜು ವಿದ್ಯಾರ್ಥಿಗಳ ಸ್ಟಾರ್ಟ್ಅಪ್ಗಾಗಿ ಸ್ಥಾಪಿಸಲಾಗಿದೆ. ಅದರ ಹ್ಯಾಷ್ಟ್ಯಾಗ್ #StartInCollege ಅದರ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.
SV.CO ಆನ್ಲೈನ್ ಯೂನಿವರ್ಸಿಟಿ ಆಗಿ ಕಾರ್ಯ ನಿರ್ವಹಿಸುತ್ತದೆ. ಎಲ್ಲಾ ಗಡಿರೇಖೆಗಳನ್ನು ಮೀರುವ ಗುರಿಯನ್ನು ಇದು ಹೊಂದಿದೆ. ಇದರ ತರಬೇತಿ, ಮೆಂಟರ್ಶಿಪ್ ಡಿಜಿಟಲ್ ರೂಪದಲ್ಲಿರುತ್ತದೆ. ಸಿಲಿಕಾನ್ ವ್ಯಾಲಿಯ ನೂರು ಸ್ಟಾರ್ಟ್ಅಪ್ ಸಂಸ್ಥಾಪಕರು ಇದರಲ್ಲಿ ಆಯ್ಕೆಯಾಗಿದ್ದು ಮೆಂಟರ್ ಆಗಲಿದ್ದಾರೆ.
ಇನ್ಫೋಸಿಸ್ ಸಹಸಂಸ್ಥಾಪಕ ಹಾಗೂ ಕೇರಳ ಸ್ಟಾರ್ಟ್ಅಪ್ ವಿಲೇಜ್ನ ಮುಖ್ಯ ಸಲಹೆಗಾರ ಕ್ರಿಸ್ ಗೋಪಾಲಕೃಷ್ಣನ್ ಅವರ ಪ್ರಕಾರ “ಡಿಜಿಟಲ್ ಇನ್ಕ್ಯುಬೇಟರ್ ಮೂಲಕ ಒಬ್ಬರು ಬೆಂಗಳೂರು, ಮುಂಬೈ, ದೆಹಲಿಯನ್ನು ಹೊರತುಪಡಿಸಿಯೂ ಎರಡನೇ ಮೂರನೇ ದರ್ಜೆಯ ನಗರ, ಹಳ್ಳಿ, ಕಾಲೇಜುಗಳನ್ನು ತಲುಪಬಹುದು. ಉದ್ಯಮ ಭಾರತದ ಪ್ರಮುಖ ನಗರಗಳಿಗೆ ಮಾತ್ರ ಸೀಮಿತವಾಗಬಾರದು” ಎಂದಿದ್ದಾರೆ.
ಡಿಜಿಟಲ್ ಇನ್ಕ್ಯುಬೇಟರ್ನ್ನು ಕೇಂದ್ರ, ರಾಜ್ಯ ಸರಕಾರ ಖಾಸಗಿ ಕಂಪೆನಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದೊಂದಿಗೆ ಕಾರ್ಯ ನಿರ್ವಹಿಸಲಿದೆ.
“ಕೆಲ ವರ್ಷಗಳ ಹಿಂದೆ ಕೇರಳ ಉದ್ಯಮ ಕೌಶಲ್ಯಕ್ಕೆ ಹೆಸರಾಗಿರಲಿಲ್ಲ. ಆದರೆ ಕೌಶಲ್ಯಯುತ ಕಾರ್ಮಿಕರಿಗೆ ಹೆಸರಾಗಿತ್ತು. ಆದರೆ ಈಗ ಅಲ್ಲಿ ಬದಲಾವಣೆಯಾಗುತ್ತಿದೆ. ಸ್ಟಾರ್ಟ್ಅಪ್ ಸಂಸ್ಕೃತಿ ಉನ್ನತ ಮಟ್ಟಕ್ಕೇರುತ್ತಿದೆ ಎಂದು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಾಣಿಜ್ಯೋದ್ಯಮ ಅಭಿವೃದ್ಧಿ ಮಂಡಳಿ ಮುಖ್ಯಸ್ಥ ಡಾ. ಹೆಚ್. ಕೆ. ಮಿತ್ತಲ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.