ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಈಶಾನ್ಯ ಭಾರತದಲ್ಲಿ ಪ್ರತ್ಯೇಕ ವಿಮಾನಯಾನ ಆರಂಭಿಸುವ ಸಾಧ್ಯತೆ ಇದ್ದು, ಅಸ್ಸಾಂ ರಾಜಧಾನಿ ಗುವಾಹಟಿ ಹೊರವಲಯದಲ್ಲಿ ಇದರ ಕೇಂದ್ರ ಇರಲಿದೆ. ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್ ಸೇರಿದಂತೆ ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಇದು ಸಂಪರ್ಕಿಸಲಿದೆ.
ವಿಮಾನಯಾನ ಸಂಪರ್ಕ ಕಡಿಮೆ ಇರುವ ಈ ಭಾಗದಲ್ಲಿ ಪ್ರವಾಸೋದ್ಯಮವು ಆದಾಯ ಕಳೆದುಕೊಳ್ಳುತ್ತಿರುವ ಕಾರಣ ಮೊದಲ ಬಾರಿಗೆ ಈಶಾನ್ಯ ಭಾಗದಲ್ಲಿ ಸಂಪರ್ಕ ಹೊಂದಲು ವಿಮಾನಯಾನ ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಇನ್ನಷ್ಟೇ ಆರಂಭಗೊಳ್ಳಬೇಕಿರುವ ವಿಮಾನಯಾನ ಸೇವೆಗೆ ಪವನ್ ಹಂಸ್ ಲಿಮಿಟೆಡ್ ಅಂಗ ಸಂಸ್ಥೆ ಕಾರ್ಯನಿರ್ವಹಿಸಲಿದ್ದು, 6 ರೆಕ್ಕೆಗಳುಳ್ಳ ವಿಮಾನಗಳು ಮತ್ತು 5 ಹೆಲಿಕಾಪ್ಟರ್ಗಳೊಂದಿಗೆ ಕಾರ್ಯ ಆರಂಭಿಸಲಿದೆ.
ಸುಮಾರು 150 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ಪವನ್ ಹಂಸ್ ಹೆಲಿಕಾಪ್ಟರ್ ಲಿಮಿಟೆಡ್ ಶೇ. 51ರಷ್ಟು ಶೇರು, ಹಾಗೂ ನಾರ್ಥ್ ಈಸ್ಟರ್ನ್ ಕೌನ್ಸಿಲ್ ಶೇ. 49 ರಷ್ಟು ಶೇರುಗಳನ್ನು ಹೊಂದಲಿದೆ.
ಈಶಾನ್ಯ ರಾಜ್ಯಗಳ ಮಖ್ಯಮಂತ್ರಿಗಳು ಹಾಗೂ ಪೂರ್ವೋತ್ತರ ವಲಯಗಳ ಇಲಾಖೆ ಸಚಿವ ಜಿತೇಂದ್ರ ಸಿಂಗ್ ಅವರನ್ನೊಳಗೊಂಡ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.