ನವದೆಹಲಿ: ಅಮೇರಿಕಾದ ಉನ್ನತ ಶಸ್ತ್ರಾಸ್ತ್ರ ಡ್ರೋನ್ ತಯಾರಕ ಕಂಪೆನಿಯು ಅಮೇರಿಕಾದ ಡ್ರೋನ್ಗಳನ್ನು ಭಾರತದಲ್ಲೂ ಸಿಗುವಂತೆ ಮಾಡಲಿದೆ. ಈ ಕಾರ್ಯಕ್ಕೆ ವೇಗದ ಚಾಲನೆ ನೀಡಲು ವರ್ಷಾಂತ್ಯದೊಳಗೆ ದೆಹಲಿಯಲ್ಲಿ ತನ್ನ ಕಚೇರಿ ಸ್ಥಾಪಿಸಲು ಮುಂದಾಗಿದೆ.
ಭಾರತೀಯ ನೌಕಾಪಡೆಗೆ ಒಂದು ಸ್ಥಿರ, ಕಾರ್ಯಪ್ರವೃತ್ತ, ಕಡಲು ಡೊಮೇನ್ ಜಾಗೃತಿ ಒದಗಿಸಲು ಭಾರತದೊಂದಿಗೆ ಸಹಕಾರ ವರ್ಧಿಸಿ, ಅಮೇರಿಕಾ ಸರ್ಕಾರದೊಂದಿಗೆ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಅಮೇರಿಕಾದ ಉನ್ನತ ಡ್ರೋನ್ ಕಂಪೆನಿ ಜನರಲ್ ಅಟೋಮಿಕ್ಸ್ ಎರೋನಾಟಿಕಲ್ ಸಿಸ್ಟಮ್ಸ್ನ ಸಿಇಒ ಲಿಂಡನ್ ಬ್ಲ್ಯೂ ಹೇಳಿದ್ದಾರೆ.
ನವದೆಹಲಿಯಲ್ಲಿ ತನ್ನ ಹೊಸ ಕಚೇರಿಯನ್ನು ತೆರೆಯುವ ಮೂಲಕ ಭಾರತ ಸರ್ಕಾರದೊಂದಿಗೆ ಕಾರ್ಯ ನಿರ್ವಹಿಸಲು ಕಂಪೆನಿ ಬಯಸಿದೆ. ಭಾರತದ ರಕ್ಷಣಾ ಸಚಿವಾಲಯ ಮತ್ತು ನೌಕಾಪಡೆಯ ಪ್ರಮುಖ ಆದ್ಯತೆಯಾದ ಕಡಲ ತೀರ ರಕ್ಷಣೆ ಮತ್ತು ಕಡಲು ಡೊಮೇನ್ ಜಾಗೃತಿ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಸಹಕರಿಸುವುದಾಗಿ ಕಂಪೆನಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.