ಜಮ್ಮು: ಪ್ರಸಿದ್ಧ ಅಮರನಾಥ ಯಾತ್ರೆ ಆರಂಭವಾಗಿ ಐದು ದಿನಗಳಾಗಿದ್ದು, ಇದುವರೆಗೆ ಒಟ್ಟು 71 ಸಾವಿರ ಯಾತ್ರಾರ್ಥಿಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಗುರುವಾರ 1,612 ಮಂದಿಯನ್ನೊಳಗೊಂಡ ಮತ್ತೊಂದು ತಂಡ ಯಾತ್ರೆ ಆರಂಭಿಸಿದೆ.
‘ಗುರುವಾರ 1,266 ಪುರುಷರು, 346 ಮಹಿಳೆಯರನ್ನು ಒಳಗೊಂಡ ತಂಡ ಭಗವತಿ ನಗರ್ ಯಾತ್ರಿ ನಿವಾಸ್ನ್ನು ತೊರೆದಿದ್ದು, 35 ಬಸ್, 22 ಲೈಟ್ ಮೋಟಾರ್ಗಳಲ್ಲಿ ಯಾತ್ರೆ ಆರಂಭಿಸಿದ್ದಾರೆ’ ಎಂದು ಶ್ರೀ ಅಮರನಾಥ್ಜೀ ದೇಗುಲ ಸಮಿತಿ ತಿಳಿಸಿದೆ.
ಜುಲೈ 2ರಂದು ಯಾತ್ರೆ ಆರಂಭಗೊಂಡಿದ್ದು, ಇದುವರೆಗೆ ನೈಸರ್ಗಿಕ ಕಾರಣಗಳಿಂದಾಗಿ ಇಬ್ಬರು ಮೃತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಮರನಾಥ ದೇಗುಲ ಸಮುದ್ರ ಮಟ್ಟಕ್ಕಿಂತ 3,888 ಅಡಿ ಎತ್ತರದಲ್ಲಿದ್ದು, ಮಂಜಿನಿಂದ ರೂಪಿತವಾದ ಶಿವಲಿಂಗವನ್ನು ಅಲ್ಲಿ ಕಾಣಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.