ಬೆಂಗಳೂರು: ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶದ ಬಳಿಕ ಅತೀ ಹೆಚ್ಚು ಡಿವೋರ್ಸ್ಗಾಗಿ ಅರ್ಜಿಗಳನ್ನು ಪಡೆದ ರಾಜ್ಯ ಕರ್ನಾಟಕ ಎಂಬುದಾಗಿ ಕರ್ನಾಟಕ ಕೌಟುಂಬಿಕ ನ್ಯಾಯಾಲಯ ನೀಡಿರುವ ಅಂಕಿಅಂಶಗಳಿಂದ ತಿಳಿದು ಬಂದಿದೆ.
2014ರಲ್ಲಿ 16,690 ದಂಪತಿಗಳು ಪರಸ್ಪರ ವಿಚ್ಛೇಧನ ಪಡೆದುಕೊಂಡರೆ, 2015ರಲ್ಲಿ 23,285 ಅರ್ಜಿ ಸಲ್ಲಿಕೆಯಾಗಿದ್ದು ನ್ಯಾಯಾಲಯದಲ್ಲಿ ಇತ್ಯರ್ಥಕ್ಕಾಗಿ ಕಾಯುತ್ತಿದೆ.
‘ಪ್ರತಿದಿನ ನಾನು 25 ಡಿವೋರ್ಸ್ ಪ್ರಕರಣಗಳನ್ನು ಪ್ರತಿನಿಧಿಸುತ್ತೇನೆ. ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ನ್ಯಾಯಾಧೀಶರಿಗೆ ಒಂದು ಪ್ರಕರಣದಲ್ಲಿ 6 ನಿಮಿಷಕ್ಕಿಂತ ಹೆಚ್ಚು ಕಾಲ ಕಳೆಯಲು ಸಾಧ್ಯವಾಗುವುದಿಲ್ಲ’ ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ವಕೀಲರಾಗಿರುವ ಬಿಎನ್ ನಾಗರಾಜ್ ಹೇಳುತ್ತಾರೆ.
ಹೊಂದಾಣಿಕೆಯ ಕೊರತೆ ಡಿವೋರ್ಸ್ಗೆ ಹೆಚ್ಚು ಕಾರಣವಾಗುತ್ತದೆ, ಎರಡನೇ ವಿವಾಹವೂ ಮುರಿದು ಬೀಳುವುದನ್ನು ನಾವು ಕಾಣುತ್ತೇವೆ. ಸಲಿಂಗ ಕಾಮ ಕೂಡ ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ಗೆ ಕಾರಣವಾಗುತ್ತಿದೆ ಎಂಬುದು ಅವರ ಅಭಿಪ್ರಾಯ.
ಮತ್ತೋರ್ವ ವಕೀಲ ರಿಶಿ.ಕೆ.ರುಯಾ ಹೇಳುವಂತೆ, ‘ಮಹಿಳೆಯರು ಅವಿವೇಕದಿಂದ ಕೂಡಿರುವುದನ್ನು ಸ್ವೀಕರಿಸಲು ಮತ್ತು ಅನ್ಯಾಯವನ್ನು ಸಹಿಸಿಕೊಳ್ಳಲು ಒಪ್ಪುವುದಿಲ್ಲ’ ಎಂಬುದು ಹೆಚ್ಚುತ್ತಿರುವ ಡಿವೋರ್ಸ್ಗಳಿಂದ ತಿಳಿದು ಬರುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.