ನವದೆಹಲಿ : ದಕ್ಷಿಣ ಕೊರಿಯಾ ಮೂಲದ ‘ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್’ ಭಾರತದ ಮಾರುಕಟ್ಟೆಗೆ ಸುಮಾರು 44 ವಿವಿಧ ಮಾದರಿಯ ಹೊಸ ಟಿವಿಗಳನ್ನು ಬಿಡುಗಡೆ ಮಾಡಿದೆ.
ಎಸ್ಯುಎಚ್ಡಿ, ಸ್ಮಾರ್ಟ್ ಹಾಗೂ ಜಾಯ್ ಬೀಟ್ ಎನ್ನುವ ಮೂರು ಸರಣಿಯಲ್ಲಿ ಪ್ರಸಕ್ತ ವರ್ಷದಲ್ಲಿ 10 ಲಕ್ಷ ಟಿವಿಗಳನ್ನು ಮಾರಾಟ ಮಾಡುವ ಗುರಿಯೊಂದಿಗೆ ಭಾರತದ ಟೀವಿ ಮಾರುಕಟ್ಟೆಯಲ್ಲಿ ಕಂಪೆನಿಯು ಶೇ. 36ಕ್ಕೆ ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ ಎನ್ನಲಾಗಿದೆ.
ಎಸ್ಯುಎಚ್ಡಿ ತಂತ್ರಜ್ಞಾನವನ್ನು ಹೊಂದಿರುವ ಕರ್ವ್ ಮಾದರಿಯ ಟಿವಿಗಳು ಕ್ವಾಂಟಮ್ ಡಾಟ್ ತಂತ್ರಜ್ಞಾನದಡಿ ಕಲರ್ ಶೇಡ್ ಪ್ರಭಾವದಿಂದ ನೈಜತೆಯನ್ನು ತೋರಿಸುತ್ತವೆ. ಇವುಗಳ ಬೆಲೆ ರೂ. 1.79 ಲಕ್ಷದಿಂದ ಸುಮಾರು ರೂ. 24 ಲಕ್ಷದವರೆಗೆ ನಿಗದಿ ಮಾಡಲಾಗಿದೆ.
ಎಲ್ಲಾ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಆಕರ್ಷಕ ವಿನ್ಯಾದೊಂದಿಗೆ, ನೂತನ ಮ್ಯೂಸಿಕ್ ಸಿಸ್ಟಂ ಒಳಗೊಂಡಂತೆ ಜಾಯ್ ಬೀಟ್ ಹೆಸರಿನಡಿ ರೂ. 29,000 ದಿಂದ ರೂ. 70,000 ದವರೆಗಿನ ಟಿವಿಗಳು ಲಭ್ಯವಾಗಲಿದೆ.
ಇನ್ನು ಅತ್ಯಾಧುನಿಕ ಸ್ಮಾರ್ಟ್ ಇಂಟರ್ಫೇಸ್ನ ಅನುಭವ ನೀಡಲು ಸ್ಮಾರ್ಟ್ ಟಿವಿ ಆವೃತ್ತಿಗಳಲ್ಲಿ ಹಲವು ಮಾದರಿಗಳು ಬರಲಿದ್ದು ಇವು ರೂ. 25,000 ದಿಂದ ಸುಮಾರು ರೂ. 7 ಲಕ್ಷದವರೆಗೂ ಇರಲಿದೆ.
ಗ್ರಾಹಕರ ಅಗತ್ಯತೆ, ಬದಲಾಗುತ್ತಿರುವ ತಂತ್ರಜ್ಞಾನ, ಹೊಸತನವನ್ನು ನೀಡುವ ನಿಟ್ಟಿನಲ್ಲಿ ವೆರೈಟಿ ಟಿವಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಸ್ಯಾಮ್ಸಂಗ್ ಇಂಡಿಯಾದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ವಿಭಾಗದ ಉಪಾಧ್ಯಕ್ಷ ರಾಜೀವ್ ಭುಟಾನಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.