ಸ್ಯಾನ್ ಫ್ರಾನ್ಸಿಸ್ಕೋ: ಫ್ರೆಂಚ್ ಸ್ಟಾರ್ಟ್ಅಪ್ ಮೂಡ್ಸ್ಟಾಕ್ಸ್ ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಗೂಗಲ್ ಹೇಳಿದೆ. ಮೂಡ್ಸ್ಟಾಕ್ಸ್ ತಂತ್ರಜ್ಞಾನ ಕಂಪ್ಯೂಟರ್ ವಿಷನ್, ಯಂತ್ರ ಕಲಿಕೆ (Machine Learning ) ಹಾಗೂ ಸ್ಮಾರ್ಟ್ಫೋನ್ಗಳು ಮತ್ತು ಮೊಬೈಲ್ ಯಂತ್ರಗಳು ಚಿತ್ರಗಳು, ವಸ್ತುಗಳನ್ನು ಗುರುತಿಸಲು ಸಹಕರಿಸುತ್ತದೆ.
ಜನರು ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಂತೆ ಕಂಪ್ಯೂಟರ್ಗಳು ಅರ್ಥ ಮಾಡುವ, ಗುರುತಿಸಿಕೊಳ್ಳುವ ತಂತ್ರಜ್ಞಾನ ಮತ್ತಿತರ ವಿಧಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಗೂಗಲ್ ಹೂಡಿಕೆ ಮಾಡುತ್ತಿದೆ.
ಗೂಗಲ್ ಭಾಷಾ ಅನುವಾದ, ವಿವಿಧ ಶ್ರೇಣಿಯ ಫೋಟೋಗಳನ್ನು ಒದಗಿಸುವ ಹಲವಾರು ಸೇವೆಗಳಿಗೆ ಕೊಡುಗೆಯನ್ನು ನೀಡುತ್ತಿದೆ.
ಮೂಡ್ಸ್ಟಾಕ್ಸ್ ತಂಡ, ಸಂಶೋಧಕರು ಮತ್ತು ಇಂಜಿನಿಯರ್ಗಳ ತಂಡವಾಗಿದ್ದು, ಪ್ಯಾರಿಸ್ನ ಗೂಗಲ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಕಂಪ್ಯೂಟರ್ ವಿಷನ್ ಕುರಿತು ಸಂಶೋಧನೆ ನಡೆಸಲಿದೆ.
ಗೂಗಲ್ ಮೇ ತಿಂಗಳಿನಲ್ಲಿ ನಡೆದ ಅಭಿವರ್ಧಕರ ಸಮ್ಮೇಳನದಲ್ಲಿ ವರ್ಚ್ಯುವಲ್ ಹೋಮ್ ಅಸಿಸ್ಟೆನ್ಸ್ ಅನಾವರಣಗೊಳಿಸಿದೆ. ಗೂಗಲ್ ಹೋಮ್ ಈ ವರ್ಷ ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು, ವರ್ಚ್ಯುವಲ್ ಅಸಿಸ್ಟೆನ್ಸ್ ಸಾಫ್ಟ್ವೇರ್ಗೆ ಅಳವಡಿಸಲಾಗುವುದು ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.