ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಭಾರತದ ಮೊದಲ ಬಯೋ ಡೀಸೆಲ್ (ಜೈವಿಕ ಇಂಧನ) ಚಾಲಿತ ಪ್ರಯಾಣಿಕ ಬಸ್ನ್ನು ಪ್ರಾರಂಭ ಮಾಡಿದೆ. ಬೆಂಗಳೂರು- ಚೆನ್ನೈ ನಡುವೆ ಸಂಚರಿಸುವ ಈ ಬಸ್ ಸಂಪೂರ್ಣವಾಗಿ ಜೈವಿಕ ಇಂಧನದ ಸಹಾಯದಿಂದ ಸಂಚಾರ ನಡೆಸಲಿದೆ.
ಸಾರಿಗೆ ಇಲಾಖೆ ಮುಂದಿನ ದಿನಗಳಲ್ಲಿ ಇನ್ನೂ 10 ಬಸ್ಗಳನ್ನು ತರುವ ಯೋಜನೆ ಹೊಂದಿದೆ. ಇಲಾಖೆ ಜೈವಿಕ ಇಂಧನವನ್ನು ಬಳಸಿ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಪ್ರಯತ್ನಿಸಲಿದ್ದು, ಇದು ಹಸಿರು ಪರಿಸರ ನಿರ್ಮಾಣಕ್ಕೆ ಸಹಾಯಕವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಇದೊಂದು ಪ್ರಾಯೋಗಿಕ ಯೋಜನೆಯಾಗಿದ್ದು, ಇದನ್ನು 17,000 (17 ಡಿಪೋಗಳು)ಕ್ಕೆ ವಿಸ್ತರಿಸುವ ಯೋಜನೆ ಇದೆ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜೀವಿಕ ಇಂಧನ ದೊರೆಯುತ್ತಿದ್ದು, ಈ ಯೋಜನೆ ಕೈಗೊಳ್ಳಲಾಗಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕಟಾರಿಯಾ ಹೇಳಿದ್ದಾರೆ.
ಪ್ರತಿ ವರ್ಷ ಸುಮಾರು ೩೦೦ ಕೋಟಿ ಲೀಟರ್ ಡೀಸೆಲ್ ಬಳಕೆಯಾಗುತ್ತಿದ್ದು, ಜೈವಿಕ ಇಂಧನ ಬಳಕೆಯಿಂದ ವಾಯು ಮಾಲಿನ್ಯ ತಡೆಗಟ್ಟುವುದು ಮಾತ್ರವಲ್ಲದೇ ಇಲಾಖೆಯ ಹಣ ಉಳಿತಾಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.