ಬೀಜಿಂಗ್: ಆನ್ಲೈನ್ ಮಾಧ್ಯಮದಲ್ಲಿ ವಿಶೇಷವಾಗಿ ಸಾಮಾಜಿಕ ತಾಣಗಳಿಂದ ಪರಿಶೀಲನೆಗೊಳಪಡಿಸದ ಮಾಹಿತಿ ಅಥವಾ ವರದಿಗಳನ್ನು ಪ್ರಕಟಿಸುವುದನ್ನು ಚೀನಾ ನಿರ್ಬಂಧಿಸಿದೆ. ಇತ್ತೀಚೆಗೆ ಚೀನಾದ ಇಂಟರ್ನೆಟ್ ನಿಯಂತ್ರಕ ಕೆಲವು ಪ್ರಮುಖ ವೆಬ್ಸೈಟ್ಗಳಿಗೆ ಕೃತ್ತ್ರಿಮ ವರದಿಗಳನ್ನು ಪ್ರಕಟಿಸಿದ್ದಕ್ಕೆ ಶಿಕ್ಷೆ ವಿಧಿಸಿತ್ತು.
ಆನ್ಲೈನ್ ಸುದ್ದಿ ಮಾಧ್ಯಮಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಲಾದ ವರದಿಗಳನ್ನು ಪರಿಶೀಲಿಸಬೇಕು ಎಂದು ಚೀನಾದ ಇಂಟರ್ನೆಟ್ ನಿಯಂತ್ರಕ ಹೇಳಿದೆ.
ಸುದ್ದಿ ಮಾಧ್ಯಮ ವೆಬ್ಸೈಟ್ಗಳು ಮಾಹಿತಿಗಳನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅಧಿಕೃತ ವರದಿಗಳನ್ನು ಪ್ರಕಟಿಸಬೇಕು. ಕೃತ್ರಿಮ ಅಥವಾ ಸತ್ಯವನ್ನು ತಿರುಚಲಾದ ವರದಿಗಳನ್ನು ಪ್ರಕಟಿಸಿದಲ್ಲಿ ವೆಬ್ಸೈಟ್ಗಳನ್ನು ನಿಷೇಧಿಸಲಾಗುವುದು ಎಂದು ಚೀನಾದ ಸೈಬರ್ಸ್ಪೇಸ್ ಆಡಳಿತ ಮಂಡಳಿ ನೋಟಿಸ್ ಜಾರಿಗೊಳಿಸಿದೆ ಎಂದು ಚೀನಾ ಸುದ್ದಿ ಸಂಸ್ಥೆ ಜಿಂಹುವಾ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.