ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರದಲ್ಲಿ 20 ಮಂದಿಯ ಮಾರಣಹೋಮ ನಡೆಸಿದ ಉಗ್ರರ ತಂಡದಲ್ಲಿ ಓರ್ವ ಅಲ್ಲಿನ ಆಡಳಿತಾರೂಢ ಪಕ್ಷ ಅವಾಮಿ ಲೀಗ್ನ ಸದಸ್ಯನೊಬ್ಬನ ಮಗ ಎಂಬುದಾಗಿ ತಿಳಿದು ಬಂದಿದೆ.
ಉಗ್ರರ ಫೋಟೋಗಳು ಬಿಡುಗಡೆಯಾದ ಬಳಿಕ ಈ ಸತ್ಯ ಬಹಿರಂಗವಾಗಿದೆ. ಅವಾಮಿ ಪಕ್ಷದ ಸದಸ್ಯನ ಮಗನನ್ನು ರೋಹನ್ ಇಬ್ನೆ ಇಮ್ತಿಯಾಝ್ ಎಂದು ಗುರುತಿಸಲಾಗಿದೆ. ಈತ ಸೇರಿದಂತೆ ಒಟ್ಟು ನಾಲ್ವರ ಗುರುತು ಪತ್ತೆಯಾಗಿದ್ದು, ಇವರು ಕಲಿತ ಶಾಲೆಯ ಬಗ್ಗೆಯೂ ಮಾಹಿತಿಯನ್ನು ಪಡೆಯಲಾಗಿದೆ. ಹೀಗಾಗಿ ಉಗ್ರರೆಲ್ಲಾ ಬಾಂಗ್ಲಾದವರೇ ಎಂಬುದು ಸಾಬೀತಾಗಿದೆ.
ರೋಹನ್ ತಂದೆ ಇಮ್ತಿಯಾಝ್ ಖಾನ್ ಬಬುಲ್ ಅವಾಮಿ ಪಕ್ಷದ ಧಾಕಾ ಸಿಟಿ ಚಾಪ್ಟರ್ ಅಧ್ಯಕ್ಷ, ಅಲ್ಲದೇ ಬಾಂಗ್ಲಾದೇಶ ಒಲಿಂಪಿಕ್ ಸಮಿತಿಯ ಕಾರ್ಯದಶಿಯಾಗಿದ್ದಾರೆ. ಜ. 4 ರಂದು ಇವರು ತಮ್ಮ ಮಗ ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಾಂಗ್ಲಾದೇಶದ ದೇಶಿ ಉಗ್ರ ಸಂಘಟನೆ ಜಾಮಿಯತುಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ಗೆ ಈ ಉಗ್ರರು ಸೇರಿದವರಾಗಿದ್ದಾರೆ ಎಂದು ಅಲ್ಲಿನ ಸರ್ಕಾರ ಘೋಷಿಸಿದ್ದು, ಇಸಿಸ್ಗೂ ಇವರಿಗೂ ಸಂಬಂಧವಿಲ್ಲ ಎಂದಿದೆ.
ದೊಡ್ಡ ದೊಡ್ಡ ಪ್ರತಿಷ್ಠಿತ ಕುಟುಂಬದಿಂದ ಬಂದ ಯುವಕರೇ ಭಯೋತ್ಪಾದನೆಯತ್ತ ಮುಖ ಮಾಡಿದ್ದಾರೆ ಎಂಬುದು ಇದರಿಂದ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.