ಫ್ರಾಕ್ಫರ್ಟ್: ಇಂಧನ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಎಲ್ಲಾ ಇಂಧನ ಚಾಲಿತ ಹೊಸ ಕಾರುಗಳನ್ನು ನಿಷೇಧಿಸುವಂತೆ ಜರ್ಮನಿ ಘೋಷಿಸಿದೆ. ಇದರೊಂದಿಗೆ ಜರ್ಮನಿ ಇಂಧನ ಚಾಲಿತ ಕಾರುಗಳನ್ನು ನಿಷೇಧಿಸುವ ವಿಶ್ವದ ಮೊದಲ ರಾಷ್ಟ್ರವಾಗಲಿದೆ.
ದೇಶದಲ್ಲಿ ನೋಂದಣಿಯಾಗುವ ಹೊಸ ಕಾರುಗಳಿಗೆ 2030ರ ವರೆಗೆ ಗಡುವು ನೀಡಲಾಗಿದೆ. ವಿದ್ಯುತ್ ಚಾಲಿತ ಕಾರುಗಳನ್ನು ಉತ್ಪಾದಿಸುವ ಮೂಲಕ ಇಂಧನ ಹೊರಸೂಸುವಿಕೆ ಮುಕ್ತವಾಗಲಿದೆ ಎಂದು ಜರ್ಮನ್ ಸರ್ಕಾರದ ಅಧಿಕಾರಿ ದೃಢಪಡಿಸಿದ್ದಾರೆ.
ಡಚ್ ಹಾಗೂ ನಾರ್ವೇ ಸರ್ಕಾರಗಳು ಇಂಧನ ಚಾಲಿತ ಕಾರುಗಳನ್ನು ನಿಷೇಧಿಸಿ 2025ರ ಒಳಗೆ ವಿದ್ಯುತ್ ಚಾಲಿತ ಕಾರುಗಳನ್ನು ಮಾರಾಟ ಮಾಡುವ ಬಗ್ಗೆ ಚರ್ಚಿಸುತ್ತಿವೆ. ಭಾರತ ಕೂಡ 2030ರ ಒಳಗೆ ವಿದ್ಯುತ್ ಚಾಲಿತ ಕಾರುಗಳನ್ನು ಹೊಂದುವ ಬಗ್ಗೆ ಮೌಲ್ಯಮಾಪನ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಜರ್ಮನ್ ತಯಾರಕ ಡೈಮ್ಲರ್ ತನ್ನದೇ ಆದ ವಿದ್ಯುತ್ ಚಾಲಿತ ರೈಲುಗಳನ್ನು ಪರಿಚಯಿಸುವ ಬಗ್ಗೆ ಪ್ರಕಟಿಸಿದ್ದು, ಇದರ ಬೆನ್ನಲ್ಲೇ ಜರ್ಮನ್ ಸರ್ಕಾರ ವಿದ್ಯುತ್ ಚಾಲಿತ ಕಾರುಗಳನ್ನು ಹೊರತರುವ ಬಗ್ಗೆ ಅಧಿಕೃತವಾಗಿ ಘೋಷಿಸಿದೆ.
ಜರ್ಮನಿ ಪರಿಸರ ಸಚಿವಾಲಯವು 1990ರಿಂದ ಹೊರಸೂಸುವಿಕೆ ಮಟ್ಟದಲ್ಲಿ ಯಾವುದೇ ಬದಲಾವಣೆ ಆಗದೇ ಇದ್ದು, ಇದನ್ನು ಕಡಿಮೆ ಮಾಡಲು ಸಾರಿಗೆ ಇಲಾಖೆ ಕೊಡುಗೆ ನೀಡುವಂತೆ ಹೇಳಿತ್ತು.
ಭಾರತ ಸರ್ಕಾರ ಕೂಡ ದುಬಾರಿ ಇಂಧನದ ಉಳಿತಾಯಕ್ಕಾಗಿ 2030ರ ಒಳಗೆ ಶೂನ್ಯ ಪಾವತಿ ಆಧಾರದಲ್ಲಿ ವಿದ್ಯುತ್ ಕಾರುಗಳನ್ನು ಒದಗಿಸುವ ಯೋಜನೆ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.