ಎಡಿನ್ಬರ್ಗ್: ಒಂದು ವೇಳೆ 2024ರ ಒಲಿಂಪಿಕ್ಸ್ ಆಯೋಜನೆ ಮಾಡುವ ಅವಕಾಶ ರೋಮ್ಗೆ ಸಿಕ್ಕರೆ ಕ್ರಿಕೆಟ್ ಕೂಡ ಒಲಿಂಪಿಕ್ಸ್ನ ಭಾಗವಾಗಲಿದೆ ಎಂದು ಇಟಾಲಿಯನ್ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಸಿಮೋನ್ ಗಾಂಬಿನೋ ಹೇಳಿದ್ದಾರೆ.
‘ರೋಮ್ ಒಲಿಂಪಿಕ್ಸ್ನ್ನು ಆಯೋಜಿಸಿದರೆ ಕ್ರಿಕೆಟ್ ಅದರ ಭಾಗವಾಗಲಿದೆ. ಆಯೋಜನಾ ಸಮಿತಿಯಾಗಿ ಈ ಬಗ್ಗೆ ನಾವು ಕಟಿಬದ್ಧರಾಗಿರುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರೋಮ್ ಸೇರಿದಂತೆ ಪ್ಯಾರೀಸ್, ಲಾಸ್ ಏಂಜಲೀಸ್, ಬುಡಪೆಸ್ಟ್ 2024ರ ಸಮ್ಮರ್ ಗೇಮ್ಸ್ ಆಯೋಜನೆ ಮಾಡಲು ಪ್ರಯತ್ನ ಆರಂಭಿಸಿವೆ. ನಿಯಮದ ಪ್ರಕಾರ ಆಯೋಜನೆ ಮಾಡುವ ರಾಷ್ಟ್ರಕ್ಕೆ 5 ಕ್ರೀಡೆಗಳನ್ನು ಒಲಿಂಪಿಕ್ಸ್ ನೀಡುವ ಅವಕಾಶ ಇದೆ. ಈ ಹಿನ್ನಲೆಯಲ್ಲಿ ರೋಮ್ ಕ್ರಿಕೆಟನ್ನು ಸೇರ್ಪಡೆಗೊಳಿಸುವುದಾಗಿ ಹೇಳುತ್ತಿದೆ.
ಒಂದು ವೇಳೆ ರೋಮ್ ಅವಕಾಶ ಪಡೆದರೆ ಬೊಲೊಗ್ನಾದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆಗೊಳ್ಳಲಿದೆ. 2010ರಲ್ಲಿ ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಜನ್ನ 4 ಪಂದ್ಯ ಇಲ್ಲಿ ನಡೆದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.