ತಿರುವನಂತಪುರಂ: ಹೆಲ್ಮೆಟ್ ಧರಿಸದೆ ಚಾಲನೆ ಮಾಡುವವರಿಗೆ ಪೆಟ್ರೋಲ್ ನೀಡದಿರಲು ಕೇರಳ ರಾಜ್ಯ ನಿರ್ಧರಿಸಿದೆ. ಆಗಸ್ಟ್ 1 ರಿಂದಲೇ ಈ ನಿಯಮ ಜಾರಿಗೆ ಬರಲಿದೆ.
ಹೆಚ್ಚುತ್ತಿರುವ ಅಪಘಾತ ಸಂಖ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿಯಮವನ್ನು ಜಾರಿಗೊಳಿಸಲಾಗಿದೆ.
ಹೆಲ್ಮಟ್ ಧರಿಸದವರಿಗೆ ಪೆಟ್ರೋಲ್ ಪಡೆಯುವ ಅವಕಾಶ ಆಗಸ್ಟ್ನಿಂದ ಇಲ್ಲ. ಈ ಬಗ್ಗೆ ಪೆಟ್ರೋಲ್ ಬಂಕ್ಗಳಿಗೆ ಸ್ಪಷ್ಟ ಆದೇಶವನ್ನು ನೀಡಲಾಗಿದೆ.
ಆ.1 ರಿಂದ ಎರ್ನಾಕುಲಂ, ತಿರುವನಂತಪುರಂಗಳಲ್ಲಿ ಈ ನಿಯಮವನ್ನು ಪರೀಕ್ಷಾರ್ಥವಾಗಿ ಜಾರಿಗೊಳಿಸಲಾಗುತ್ತಿದ್ದು, ಬಳಿಕ ಇತರ ಪ್ರದೇಶಗಳಿಗೆ ವಿಸ್ತರಿಸಲಾಗುತ್ತದೆ.
ಹೆಲ್ಮೆಟ್ ಕಡ್ಡಾಯ ನಿಯಮವಿದ್ದರೂ ಹೆಚ್ಚಿನವರು ಅದನ್ನು ನಿರ್ಲಕ್ಷ್ಯಿಸುತ್ತಾರೆ. ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿದಾಗ ದಂಡ ಕಟ್ಟಿ ಮುಂದೆ ಸಾಗುತ್ತಾರೆ. ಆದರೆ ಇನ್ನು ಮುಂದೆ ದಂಡ ಕಟ್ಟುವುದು ಮಾತ್ರವಲ್ಲ ಪೆಟ್ರೋಲ್ ಕೂಡ ಹೆಲ್ಮಟ್ ಧರಿಸದವರಿಗೆ ಸಿಗುವುದಿಲ್ಲ. ಜನ ಸಾರಿಗೆ ನಿಯಮ ಪಾಲಿಸುವಂತೆ ಮಾಡುವ ನಿಟ್ಟಿನಲ್ಲಿ ಇದೊಂದು ಉತ್ತಮ ಯೋಜನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.