ನವದೆಹಲಿ: ದೇಶಿ ನಿರ್ಮಿತ ಬಹು ತೂಕದ ಆಂಟಿ ಸಬ್ಮರೈನ್ ಟರ್ಪೆಡೋ ವರುಣಾಸ್ತ್ರವನ್ನು ಯಶಸ್ವಿಯಾಗಿ ನೌಕಾಸೇನೆಗೆ ಸೇರ್ಪಡೆಗೊಳಿಸಲಾಯಿತು.
ಈ ಮೂಲಕ ಇಂತಹ ಸಬ್ಮರೈನ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವ ಮತ್ತು ತಯಾರಿಸುವ 8 ದೇಶಗಳ ಪೈಕಿ ಭಾರತವೂ ಒಂದಾಗಿ ಹೊರಹೊಮ್ಮಿದೆ.
ಡಿಆರ್ಡಿಓದ ಪ್ರೀಮಿಯರ್ ಲ್ಯಾಬೊರೇಟರಿ ನಾವೆಲ್ ಸೈನ್ಸ್ ಆಂಡ್ ಟೆಕ್ನಲಾಜಿಕಲ್ ಲ್ಯಾಬೊರೇಟರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಎಲೆಕ್ಟ್ರಿಕ್ ಟರ್ಪೆಡೋವನ್ನು ಅಧಿಕೃತವಾಗಿ ನೌಕಾಸೇನೆಗೆ ಹಸ್ತಾಂತರ ಮಾಡಲಾಯಿತು.
ಇದು ನೌಕಾಸೇನೆಗೆ ಹೆಚ್ಚಿನ ಬಲವನ್ನು ನೀಡಲಿದೆ ಮತ್ತು ಭಾರತ ದೇಶೀಯ ಸಾಮರ್ಥ್ಯಕ್ಕೆ ಪುಷ್ಟಿ ಒದಗಿಸಲಿದೆ, ಇತರ ದೇಶಗಳಿಗೂ ರಫ್ತು ಮಾಡುವ ಅವಕಾಶವನ್ನು ಒದಗಿಸಲಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ವರುಣಾಸ್ತ್ರ 1.25 ಟನ್ ತೂಕವಿದ್ದು, ಗಂಟೆಗೆ 40 ನಾಟಿಕಲ್ ಮೈಲು ವೇಗದಲ್ಲಿ 250 ಕೆಜಿ ಸ್ಫೋಟಕಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಪ್ರತಿ ಯುನಿಟ್ಗೆ 10-12 ಕೋಟಿ ವ್ಯಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.