ಮುಂಬಯಿ: ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ಜಿ ಲೋಕೋಪಕಾರಿ ಕಾರ್ಯಗಳಿಗೆ ಹೆಚ್ಚಿನ ಮಟ್ಟದಲ್ಲಿ ದಾನ ನೀಡುವುದಾಗಿ ಹೇಳಿಕೊಂಡಿದ್ದಾರೆ. ಈಗಾಗಲೇ ತಮ್ಮ ಸಂಪತ್ತಿನ ಶೇ.39ರಷ್ಟು ಪಾಲನ್ನು ಇತರ ಕಾರ್ಯಗಳಿಗೆ ದಾನ ನೀಡಲಾಗಿದ್ದು, ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಉದ್ಯಮ ನಾಯಕರಿಗೆ ಹೇಳಿದ್ದಾರೆ.
ಅನೇಕ ಆದರ್ಶಗಳು, ನನ್ನ ತಿಳುವಳಿಕೆ, ವಿಶ್ವಸ್ಥ ನಂಬಿಕೆಗಳ ಪ್ರಭಾವದಿಂದ ಅಕಿಂ ಪ್ರೇಮ್ಜೀ ಫೌಂಡೇಶನ್ಗೆ ವಿಪ್ರೋದ ಸಂಪಪತ್ತಿನ ಶೇ.39ರಷ್ಟು ದಾನ ಮಾಡಿದ್ದು, ಜೀವನದ ಕೊನೆವರೆಗೂ ಇದನ್ನು ಮುಂದುವರೆಸುವುದಾಗಿ ಅಜೀಂ ಪ್ರೇಮ್ಜೀ ಹೇಳಿದ್ದಾರೆ.
ಇಂಡಿಯನ್ ಮಚೆಂಟ್ ಚೇಂಬರ್ ಅಜೀಂ ಪ್ರೇಮ್ಜೀ ಅವರಿಗೆ ಜೀವನಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿದ್ದು, ವ್ಯಾಪಾರ ನಾಯಕರು ದೊಡ್ಡ ಪ್ರಮಾಣದಲ್ಲಿ ಸಮಾಜ ಕಾರ್ಯದಲ್ಲಿ ತೊಡಗಬೇಕು ಎಂದು ಪ್ರೇಂಜೀ ಹೇಳಿದ್ದಾರೆ.
ವ್ಯಾಪಾರ ನಾಯಕರು ತಮ್ಮ ಸಾಮರ್ಥ್ಯ ಮತ್ತು ವ್ಯಾಪಾರ ಸೃಷ್ಠಿ ಸಾಮರ್ಥ್ಯದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ. ವೈಯಕ್ತಿಕವಾಗಿ ತಮ್ಮನ್ನು ತೊಡಗಿಸುವುದು ಮತ್ತು ಸಂಸ್ಥೆಗಳನ್ನು ಕಟ್ಟುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.