ನವದೆಹಲಿ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಮತ್ತೆ 25 ದಾಖಲೆಗಳನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಿದೆ.
www.netajipapers.gov.in ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಈ ದಾಖಲೆಗಳ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಟ್ವಿಟರ್ನಲ್ಲಿ ಬುಧವಾರ ಮಾಹಿತಿ ನೀಡಿದೆ.
ಬೋಸ್ ಅವರ ನಿಗೂಢ ಕಣ್ಮರೆ ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ಜಸ್ಟಿಸ್ ಮುಖರ್ಜಿ ತನಿಖಾ ಆಯೋಗ ೨೦೦೬ರಲ್ಲಿ ನೀಡಿದ ವರದಿಯ ಮಾಹಿತಿ ಈ ದಾಖಲೆಗಳಲ್ಲಿದೆ.
ರೆಂಕೋಜಿ ದೇಗುಲದಲ್ಲಿರುವ ನೇತಾಜೀ ಚಿತಾ ಭಸ್ಮದ ಫೋಟೋ, ನೇತಾಜೀ ಬಗ್ಗೆ ರಷ್ಯಾ ಸಂಸತ್ತಿನ ಪ್ರಶ್ನೆ, ನೇತಾಜೀ ಮನೆಯನ್ನು ಮ್ಯೂಸಿಯಂ ಮಾಡಲು ಅಮಿಯಾ ನಾಥ್ ಬೋಸ್ ಅವರು ನೆಹರೂರವರಿಗೆ ಬರೆದ ಪತ್ರ, ಇಂಡಿಯನ್ ನ್ಯಾಷನಲ್ ಆರ್ಮಿಯ ಆಸ್ತಿ ವಿವರ ಹೀಗೆ ಹಲವಾರು ಮಾಹಿತಿಗಳು ಈ ದಾಖಲೆಯಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.