ನವದೆಹಲಿ: ಉತ್ತರಪ್ರದೇಶದಲ್ಲಿ ಅಧಿಕಾರಕ್ಕೇರುವ ಮಹದಾಸೆ ಹೊತ್ತಿರುವ ಕಾಂಗ್ರೆಸ್ ಪ್ರಿಯಾಂಕ ಗಾಂಧಿಯಿಂದ ಸಕ್ರಿಯ ಪ್ರಚಾರವನ್ನು ನಡೆಸುವ ಚಿಂತನೆ ನಡೆಸಿದೆ. ಇದುವರೆಗೆ ರಾಯ್ ಬರೇಲಿ ಮತ್ತು ಅಮೇಥಿಗೆ ಮಾತ್ರ ಸೀಮಿತವಾಗಿದ್ದ ಅವರು ಈ ಬಾರಿ ರಾಜ್ಯದ ಉಳಿದ ಕಡೆಯೂ ಪ್ರಚಾರ ಹಮ್ಮಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಉತ್ತರಪ್ರದೇಶದಲ್ಲಿ 2017ರಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ನ ಮಹಿಳಾ ಘಟಕ ಪ್ರಿಯಾಂಕ ಅವರ ಪ್ರಚಾರ ಕಾರ್ಯಕ್ಕೆ ಈಗಿನಿಂದಲೇ ತಯಾರಿಗಳನ್ನು ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್, ಉತ್ತರಪ್ರದೇಶದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಭೇಟಿಯಾಗಿ, ಅವರ ಕುಟುಂಬಗಳಿಗೆ ನೆರವು ನೀಡುವ ಕಾರ್ಯಗಳನ್ನು ಮಾಡುತ್ತಿದೆ. ಮಹಿಳಾ ಘಟಕ ಸೆಪ್ಟಂಬರ್ ತಿಂಗಳಲ್ಲಿ ವಿಧಾನಸಭಾಕ್ಕೆ ಘೇರಾವ್ ಹಾಕುವ ಯೋಜನೆಯನ್ನೂ ರೂಪಿಸಿದೆ.
ಆದರೆ ತನ್ನ ಪ್ರಚಾರದ ಬಗ್ಗೆ ಪ್ರಿಯಾಂಕ ಇನ್ನು ಅಂತಿಮ ನಿರ್ಧಾರವನ್ನು ತಿಳಿಸಬೇಕಷ್ಟೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.