ವಾಷಿಂಗ್ಟನ್: ಭಾರತದ ಎನ್ಎಸ್ಜಿ ಸದಸ್ಯತ್ವ ಪಡೆಯುವ ಪ್ರಯತ್ನಕ್ಕೆ ಚೀನಾ ಸೇರಿದಂತೆ ಇತರ ರಾಷ್ಟ್ರಗಳು ತಣ್ಣೀರು ಎರೆಚಿದ ಒಂದು ವಾರಗಳ ಬಳಿಕ ಹೇಳಿಕೆ ನೀಡಿರುವ ಅಮೆರಿಕಾ, ಒಂದು ರಾಷ್ಟ್ರದಿಂದ ಭಾರತ ನ್ಯೂಕ್ಲಿಯರ್ ಕ್ಲಬ್ ಸೇರುವುದನ್ನು ತಡೆಯಲು ಸಾಧ್ಯವಿಲ್ಲ ಎಂದಿದೆ.
ಅಮೆರಿಕಾ ಭಾರತ ಎನ್ಎಸ್ಜಿ ಸದಸ್ಯತ್ವ ಪಡೆಯುವುದನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿತ್ತು. ಚೀನಾ ಮತ್ತು ಅದರ ಬೆಂಬಲಿಗ ರಾಷ್ಟ್ರಗಳ ಹಠಮಾರಿ ಧೋರಣೆಯಿಂದಾಗಿ ಸದಸ್ಯತ್ವ ಪಡೆಯುವ ಭಾರತದ ಕನಸು ಕನಸಾಗಿಯೇ ಉಳಿಯಿತು.
ಮುಂದೆಯೂ ಭಾರತ ಎನ್ಎಸ್ಜಿ ಸದಸ್ಯತ್ವ ಪಡೆಯುವುದಕ್ಕೆ ಅಮೆರಿಕಾ ಬದ್ಧವಾಗಿರುತ್ತದೆ ಎಂದು ಯುಎಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಎಂಟಿಸಿಆರ್ಗೆ ಭಾರತ ಎಂಟ್ರಿ ಕೊಟ್ಟಿದ್ದರಿಂದ ಅದು ಜವಾಬ್ದಾರಿಯುತ ಹಾಗೂ ಮಹತ್ವದ ನಾನ್ ಪ್ರೊಲಿಫರೇಶನ್ ರಾಷ್ಟ್ರ ಎಂದು ತಿಳಿದು ಬರುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.