ನವದೆಹಲಿ: ವಾಟ್ಸ್ಆ್ಯಪ್ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯುಂಟು ಮಾಡುತ್ತಿದ್ದು, ಅದನ್ನು ನಿಷೇಧಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಹರ್ಯಾಣ ಮೂಲದ ಮಾಹಿತಿ ಹಕ್ಕುಗಳ ಕಾರ್ಯಕರ್ತ ಸುಧೀರ್ ಯಾದವ್ ಅರ್ಜಿ ಸಲ್ಲಿಸಿದ್ದು, ವಾಟ್ಸ್ಆ್ಯಪ್ ಗೂಢಲಿಪೀಕರಣ ಭದ್ರತೆಯನ್ನು ಒದಗಿಸುತ್ತಿದ್ದು, ಭಯೋತ್ಪಾದಕರು ವಾಟ್ಸ್ಆಪ್ ಸಂವಹನ ಮಾಹಿತಿಗಳನ್ನು ಭೇದಿಸಲು ಅಸಾಧ್ಯವಾದ್ದರಿಂದ ಅದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ವಾಟ್ಸ್ಆ್ಯಪ್ನ ಪ್ರತಿಯೊಂದು ಸಂದೇಶವು 256 ಬಿಟ್ ಎನ್ಕ್ರಿಪ್ಷನ್ (encryption) ಹೊಂದಿದೆ. ಇದನ್ನು ಭೇದಿಸಲು ಸಾಧಯವಿಲ್ಲ. ಇನ್ನು ವಾಟ್ಸ್ಆಪ್ ಸಂದೇಶಗಳ ಡಾಟಾವನ್ನು ಸರ್ಕಾರಕ್ಕೆ ಒಪಪಿಸುವಂತೆ ಕೋರಿದಲ್ಲಿ ಎನ್ಕ್ರಿಪ್ಷನ್ (encryption) ಸದೇಶಗಳನ್ನು ಡೀಕ್ರಿಪ್ಷನ್ (decryption) ಮಾಡುವ ಪ್ರಕ್ರಿಯೆ ವಾಟ್ಸ್ಆ್ಯಪ್ನಿಂದಲೂ ಅಸಾಧ್ಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಸಂದೇಶಗಳನ್ನು ಡೀಕ್ರಿಪ್ಟ್ ಮಾಡಲು ಸಾಧ್ಯವಾಗದಿರುವುದರಿಂದ ಭಯೋತ್ಪಾದಕರು ಅಥವಾ ದುಷ್ಕರ್ಮಿಗಳು ವಾಟ್ಸ್ಆ್ಯಪ್ ಸಂದೇಶಗಳನ್ನು ಕಳುಹಿಸುವ ಮೂಲಕ ದೇಶದ ಮೇಲೆ ದಾಳಿ ನಡೆಸಲು ಪೂರ್ವ ಯೋಜನೆ ರೂಪಿಸಬಹುದು. ಇದನ್ನು ಭೇದಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಗುಪ್ತಚರ ಸಂಸ್ಥೆಗಳು ವಿಫಲವಾಗಬಹುದು ಎಂದು ಸುಧೀರ್ ಯಾದವ್ ತಮ್ಮ ಅರ್ಜಿಯಲ್ಲಿ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.