ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕುರಿತಾದ ‘ಇಟ್ಟ ಗುರಿ ದಿಟ್ಟ ಹೆಜ್ಜೆ’ ಎಂಬ ಪುಸ್ತಕವನ್ನು ಸರ್ಕಾರಿ ಪ್ರಾಥಮಿಕ, ಫ್ರೌಢಶಾಲೆ, ಅನುದಾನಿತ ಶಾಲೆಗಳು ಖರೀದಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಪುಸ್ತಕವನ್ನು ಎಲ್ಲಾ ಶಾಲೆಗಳ ಗ್ರಂಥಾಲಯಗಳಲ್ಲಿಟ್ಟು ಮಕ್ಕಳಿಗೆ ಓದಿಸಬೇಕೆಂದು ಮಾರ್ಚ್ನಲ್ಲೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು ಎನ್ನಲಾಗಿದೆ.
ಸುಮಾರು 342 ಪುಟಗಳಿರುವ ಈ ಪುಸ್ತಕವು ಸಿದ್ದರಾಮಯ್ಯ ಅವರ ರಾಜಕೀಯ ಜೀವನ, ಸಾಧನೆ ಇವುಗಳನ್ನೊಳಗೊಂಡಿದೆ. ಈ ಪುಸ್ತಕಕ್ಕೆ ತುಮಕೂರು ಮಹಾದೇವಯ್ಯ ಪ್ರಧಾನ ಸಂಪಾದಕರು ಹಾಗೂ ಜಿಜಿ ನಾಗರಾಜು ಅವರು ಸಂಪಾದಕರು.
ಪುಸ್ತಕದಲ್ಲಿ ಹಲವು ಪ್ರಬಂಧಗಳೂ ಇವೆಯಂತೆ, ಅದರಲ್ಲಿ ಒಂದು ‘ನಾನು ಕಂಡ ಹಾಗೆ ಸಿದ್ದರಾಮಯ್ಯ’ ಎಂಬ ಪ್ರಬಂಧವು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೋಲಿಸುವ ಒಂದು ಅಧ್ಯಾಯ ಒಳಗೊಂಡಿದೆ. ಹೀಗೆಯೇ ಇನ್ನು ಕೆಲವು ಅಧ್ಯಾಯಗಳು – ಸಿದ್ದರಾಮಯ್ಯ ಅವರ ಆರೋಗ್ಯಕರ ಆಡಳಿತ; ಏಕೆ ಅವರು ಒಂದು ಸರಳ ಮತ್ತು ಪ್ರಾಮಾಣಿಕ ರಾಜಕಾರಣಿ ; ಅವರ ತತ್ವ ಮತ್ತು ಸಾಧನೆಗಳು; ಸಿದ್ದರಾಮಯ್ಯ ಅವರ ಸಮಾಜ ಆಧಾರಿತ ಯೋಜನೆಗಳು; ಅಧಿಕಾರಕ್ಕೆ ಅವರ ಮಾರ್ಗ ; ತನ್ನ ಗುರಿಗಳನ್ನು ಈಡೇರಿಸುವ ಕಡೆಗೆ ನಡೆ ; ಆರೋಗ್ಯಕರ ಸಮಾಜದ ಕಲ್ಪನೆ ‘, ಹೀಗೆ ಅನೇಕ ಅಧ್ಯಾಯಗಳನ್ನು ಒಳಗೊಂಡಿದೆಯಂತೆ.
ಸುತ್ತೋಲೆ ಕುರಿತು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವೀರಯೋಧರು, ಸ್ವಾತಂತ್ರ್ಯಹೋರಾಟಗಾರರು, ರಾಜ- ಮಹಾರಾಜರು, ಮಹಾಪುರುಷರನ್ನು ಕುರಿತ ಪುಸ್ತಕವನ್ನು ಓದಿ ಎಂದರೆ ಅದು ಸಹಜವಾದದ್ದು. ಆದರೆ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕುರಿತ ಪುಸ್ತಕಗಳನ್ನು ಮಕ್ಕಳಿಗೆ ಓದಲು ಹೇಳುವುದು ಎಷ್ಟು ಸರಿ ಎನ್ನುವುದನ್ನು ಅವರೇ ಹೇಳಬೇಕಷ್ಟೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.