ಕೊಚ್ಚಿ: ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಅಧಿಕಾರ ವಹಿಸಿಕೊಂಡು ಒಂದು ತಿಂಗಳುಗಳು ಕಳೆದರೂ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಮಾಡುತ್ತಿರುವ ಟೀಕೆಗಳು ಅಂತ್ಯಗೊಂಡಿಲ್ಲ.
ಇದೀಗ ಅವರನ್ನು ಕಾಂಗ್ರೆಸ್ ತನ್ನ ನಂಬರ್ ಒನ್ ರಾಜಕೀಯ ಶತ್ರು ನರೇಂದ್ರ ಮೋದಿಯವರಿಗೆ ಹೋಲಿಕೆ ಮಾಡಿದೆ. ಅವರು ಮೋದಿ ಶೈಲಿಯನ್ನು ನಕಲು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಮೋದಿಯಂತೆ ವಿಜಯನ್ ಅವರು ಮಾಧ್ಯಮಗಳನ್ನು ದೂರವಿಡುತ್ತಿದ್ದಾರೆ. ಮೋದಿ ಕಮ್ಯೂನಲ್ ಫ್ಯಾಸಿಸಂನ್ನು ದೇಶದಲ್ಲಿ ಪರಿಚಯಿಸುತ್ತಿದ್ದಾರೆ, ವಿಜಯನ್ ಅವರು ಪೊಲಿಟಿಕಲ್ ಫ್ಯಾಸಿಸಂನ್ನು ಪರಿಚಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರತಿ ಸಿಎಂಗಳು ಸಂಪುಟದ ಬಗ್ಗೆ ವಿವರಿಸಲು ಮಾಧ್ಯಮಗಳನ್ನು ವಾರಕ್ಕೆ ಒಮ್ಮೆಯಾದರೂ ಭೇಟಿಯಾಗುತ್ತಾರೆ, ಆದರೆ ವಿಜಯನ್ ಈ ನಿಯಮವನ್ನು ಮುರಿದಿದ್ದಾರೆ ಎಂದು ಕೇರಳ ವಿರೋಧ ಪಕ್ಷದ ನಾಯಕ ಸುಧೀರನ್ ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.