ನವದೆಹಲಿ: ಟೈಮ್ಸ್ ನೌ ಚಾನೆಲ್ಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ 85 ನಿಮಿಷಗಳ ನೇರ ಸಂದರ್ಶನ ಟ್ವಿಟರ್ನಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿದೆ.
ಸಂದರ್ಶನದ ವೇಳೆ 250,೦00 ಟ್ವಿಟ್ಗಳು ಈ ಬಗ್ಗೆ ಹರಿದಾಡಿದ್ದು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಇದರಲ್ಲಿ 170,000 ಟ್ವಿಟ್ ಸಂಭಾಷಣೆ 6 ಗಂಟೆಯ ಅವಧಿಯೊಳಗೆ ನಡೆದಿದೆ ಎಂಬುದು ವಿಶೇಷ.
ಮೋದಿಯವರ ನೇರ ಸಂದರ್ಶವನ್ನು ದೇಶ, ವಿದೇಶಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಜನ ವೀಕ್ಷಣೆ ಮಾಡಿದ್ದಾರೆ, ಮಾತ್ರವಲ್ಲ ಈ ಬಗ್ಗೆ ಅಧಿಕೃತ ಹ್ಯಾಶ್ಟ್ಯಾಗ್ ’#PMSpeaksToArnab’ನಲ್ಲಿ ಚರ್ಚಿಸಿದ್ದಾರೆ. ಸಂದರ್ಶನ ಆರಂಭವಾಗುತ್ತಿದ್ದಂತೆ ಟೈಮ್ಸ್ ನೌ ಟ್ವಿಟ್ ಮಾಡುತ್ತಿತ್ತು. ಆ ಬಳಿಕ ಟ್ವಿಟರ್ನಲ್ಲಿ ದೊಡ್ಡ ದಾಖಲೆಯೇ ಸೃಷ್ಟಿಯಾಗಿದೆ.
’ಟ್ವಿಟರ್ನಲ್ಲಿ ಈ ಸಂದರ್ಶನ ಸೃಷ್ಟಿಸಿದ ಅಲೆ ಟ್ವಿಟರ್ ಎಷ್ಟು ಶೀಘ್ರ, ವಿಸ್ತಾರವಾಗಿ ಹಬ್ಬುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ. ಟ್ವಿಟರ್ನ ತಲುಪುವಿಕೆ ಮತ್ತು ವಾಸ್ತವತೆ ಈ ಬಝ್ ಸೃಷ್ಟಿಗೆ ಕಾರಣವಾಯಿತು. ಈ ಟ್ವಿಟರ್ ಸಂಭಾಷಣೆ ಐತಿಹಾಸಿಕ ಸಂದರ್ಶನಕ್ಕೆ ಹೊಸ ಆಯಾಮವನ್ನೇ ನೀಡಿತು’ ಎಂದು ಟ್ವಿಟರ್ ಇಂಡಿಯಾದ ಮುಖ್ಯಸ್ಥ ವಿರಳ್ ಜಾನಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.