ಶ್ರೀನಗರ: 2002ರ ಜನವರಿ 1ರಿಂದ 2015ರ ಡಿಸೆಂಬರ್ 31ರವರೆಗೆ ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನ 11,೨270 ಬಾರಿ ಕದನವಿರಾಮ ಉಲ್ಲಂಘನೆ ಮತ್ತು ಅಪ್ರಚೋದಿತ ಗುಂಡಿನ ದಾಳಿ ಮಾಡಿದೆ.
ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಮಂಗಳವಾರ ಶಾಸಕಾಂಗ ಸಮಿತಿಗೆ ಈ ಬಗೆಗಿನ ಮಾಹಿತಿಯನ್ನು ನೀಡಿದ್ದಾರೆ.
2002ರಿಂದ ನಡೆದ ಕದನವಿರಾಮಗಳಿಂದಾಗಿ ಒಟ್ಟು 313 ಜನ ಅಸುನೀಗಿದ್ದಾರೆ, ಇದರಲ್ಲಿ 144 ಭದ್ರತಾ ಸಿಬ್ಬಂದಿಗಳು. 2002ರಲ್ಲಿ ಅತೀ ಹೆಚ್ಚು ಅಂದರೆ 3376 ಘಟನೆಗಳು ನಡೆದಿವೆ. 2003ರಲ್ಲಿ 2015 ಘಟನೆಗಳು ನಡೆದಿವೆ ಎಂದು ಮುಫ್ತಿ ತಿಳಿಸಿದ್ದಾರೆ.
ಭಾರತ-ಪಾಕ್ ನಡುವೆ ಕದನ ವಿರಾಮ 2003ರ ನವೆಂಬರ್ನಲ್ಲಿ ಜಾರಿಗೆ ಬಂತು. 2004, 2005ಮತ್ತು 2007ರಲ್ಲಿ ಒಂದೇ ಒಂದು ಕದನವಿರಾಮ ಉಲ್ಲಂಘನೆಗಳು ನಡೆದಿರಲಿಲ್ಲ. ಬಳಿಕದ ಹತ್ತು ವರ್ಷದಲ್ಲಿ ಪಾಕ್ ಕದನವಿರಾಮ ಉಲ್ಲಂಘಿಸಿ ನಾಲ್ವರ ಹತ್ಯೆಗೆ ಕಾರಣವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.