ನವದೆಹಲಿ: ‘ಪಂಚಮ್ ದಾ’ ಎಂದೇ ಖ್ಯಾತರಾಗಿರುವ ಸಂಗೀತ ನಿರ್ದೇಶಕ ಆರ್. ಡಿ. ಬರ್ಮನ್ ಅವರ 77 ನೇ ಹುಟ್ಟುಹಬ್ಬದ ನಿಮಿತ್ತ ಡೂಡಲ್ನಲ್ಲಿ ಅವರ ಇಮೇಜ್ನ್ನು ಹಾಕಿ ಗೂಗಲ್ ಸಂಭ್ರಮಾಚರಣೆ ಮಾಡಿದೆ.
ಖ್ಯಾತ ಸಂಗೀತ ನಿರ್ದೇಶಕ ಎಸ್.ಡಿ.ಬರ್ಮನ್ ಅವರ ಏಕೈಕ ಮಗನಾಗಿರುವ ಆರ್ಡಿ ಬರ್ಮನ್ ತಂದೆಯ ಹೆಜ್ಜೆ ಗುರುತಿನಲ್ಲೇ ಮುಂದೆ ಸಾಗಿದವರು. ಆದರೆ ಬೆಳೆಯುತ್ತಾ ಬೆಳೆಯುತ್ತಾ ಸಾರ್ವಕಾಲಿಕ ಶ್ರೇಷ್ಠ ಸಂಗೀತ ನಿರ್ದೇಶಕನಾಗಿ ಹೊರಹೊಮ್ಮಿದರು.
ತನ್ನ 9ನೇ ವಯಸ್ಸಿನಲ್ಲೇ ಸಂಗೀತ ನಿರ್ದೇಶಿಸಿದ ಕೀರ್ತಿ ಅವರದ್ದು, ಮೆಲೋಡಿ, ಡಿಸ್ಕೋ, ಕ್ಯಾಬರೇಟ್ ಹೀಗೆ ಎಲ್ಲಾ ವಿಧದ ಸಂಗೀತವನ್ನೂ ನಿರ್ದೇಶಿಸಿದ ಕೀರ್ತಿ ಅವರದ್ದು.
ಸಂಗೀತವನ್ನು ಸೃಷ್ಟಿಸಲು ಬಿದಿರು, ಬೀಯರ್ ಬಾಟಲ್, ಸ್ಯಾಂಡ್ ಪೇಪರ್ಗಳನ್ನೂ ಬಳಸಿದ, ಎಲೆಕ್ಟ್ರಾನಿಕ್ ರಾಕ್ನ್ನು ಪ್ರಸಿದ್ಧಗೊಳಿಸಿದ ಇವರು, ಸಮಕಾಲೀನ ಸರ್ವಶ್ರೇಷ್ಠ ಸಂಗೀತಜ್ಞ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.