ನವದೆಹಲಿ: ಕಳೆದ ವರ್ಷ ಎಪ್ರಿಲ್ನಲ್ಲಿ ಅತೀ ಜನಪ್ರಿಯ ಸೋಶಿಯಲ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ವಿಶ್ವದಾದ್ಯಂತ ತನ್ನ ಬಳಕೆದಾರರಿಗಾಗಿ ವಾಯ್ಸ್ ಕಾಲಿಂಗ್ ಫೀಚರ್ನ್ನು ಪರಿಚಯಿಸಿತ್ತು.
ಆಂಡ್ರಾಯ್ಡ್ ಬಳಸುವವರಿಗೆ ಮಾತ್ರ ಈ ಫೀಚರ್ನ್ನು ಮೊದಲು ಪರಿಚಯಿಸಲಾಗಿತ್ತಾದರೂ, ಬಳಿಕ ಐಒಎಸ್, ಬ್ಲ್ಯಾಕ್ ಬೆರಿ ಮತ್ತು ವಿಂಡೋಸ್ ಫೋನ್ಗಳಲ್ಲೂ ಇದರ ಬಳಕೆ ಆರಂಭವಾಗಿತ್ತು.
ಇದೀಗ ಪ್ರತಿದಿನ ವಿಶ್ವದಾದ್ಯಂತ ವಾಟ್ಸಾಪ್ ಬಳಕೆದಾರರು 100 ಮಿಲಿಯನ್ ವಾಯ್ಸ್ ಕಾಲ್ಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಫೇಸ್ಬುಕ್ ಒಡೆತನದ ವಾಟ್ಸಾಪ್ ಸಂಸ್ಥೆ ಅಧಿಕೃತ ಘೋಷಣೆ ಮಾಡಿದೆ.
ವಾಟ್ಸಾಪ್ನಲ್ಲಿ ದಿನವೊಂದಕ್ಕೆ 100 ಮಿಲಿಯನ್ ಕರೆಗಳನ್ನು ಮಾಡಲಾಗುತ್ತಿದೆ, ಸೆಕೆಂಡ್ಗೆ 1,100 ಕರೆ ಮಾಡಲಾಗುತ್ತಿದೆ. ವರ್ಷದಿಂದೀಚೆ ಜನ ತಮ್ಮ ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಮಾತನಾಡಲು ವಾಟ್ಸಾಪ್ ಬಳಸುತ್ತಿದ್ದಾರೆ. ಇದೊಂದು ಮಹತ್ವದ ಬೆಳವಣಿಗೆ ಎಂದಿದೆ.
ಹೆಚ್ಚು ಹೆಚ್ಚು ಗ್ರಾಹಕ ಸ್ನೇಹಿಯಾಗುವ ನಿಟ್ಟಿನಲ್ಲಿ ವಾಟ್ಸಾಪ್ ಹೆಚ್ಚು ಹೆಚ್ಚು ಫೀಚರ್ಗಳನ್ನು ಸೇರ್ಪಡೆಗೊಳಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.