ಸಿಯೋಲ್: ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ಎನ್ಎಸ್ಜಿಯ ಉನ್ನತ ಮಟ್ಟದ ಸಭೆಯಲ್ಲಿ, ಭಾರತದ ಸದಸ್ಯತ್ವಕ್ಕೆ ಚೀನಾದ ವಿರೋಧ ಮುಂದುವರೆದಿದೆ. ಸ್ವಿಟ್ಜರ್ಲ್ಯಾಂಡ್ ಕೂಡ ವಿರೋಧ ವ್ಯಕ್ತಪಡಿಸಿದೆ.
ಭಾರತದೊಂದಿಗೆ ಪರಮಾಣು ದ್ವಿಪಕ್ಷೀಯ ಮಾತುಕತೆಗೆ ಸಿದ್ಧ ಎಂದು ಚೀನಾ ಹೇಳಿಕೊಂಡಿದೆ. ಅಲ್ಲದೇ ಈ ಸಂಬಂಧ ಪಾಕಿಸ್ಥಾನವನ್ನೂ ಬೆಂಬಲಿಸುವುದಿಲ್ಲ ಎಂದಿದೆ.
ಈ ಹಿಂದೆ ಭಾರತವನ್ನು ಬೆಂಬಲಿಸಿದ್ದ ಸ್ವಿಟ್ಜರ್ಲ್ಯಾಂಡ್ ಇದೀಗ ಎನ್ಪಿಟಿ ಒಪ್ಪಂದವನ್ನು ಮುಂದಿಟ್ಟುಕೊಂಡು ಭಾರತವನ್ನು ವಿರೋಧಿಸುತ್ತಿದೆ.
ಬ್ರೆಝಿಲ್ ಭಾರತದ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿದೆ, ಆದರೆ ಎಲ್ಲಾ ನಾನ್-ಎನ್ಪಿಟಿ ದೇಶಗಳಿಗೆ ಸಮಾನ ಕ್ರೈಟೀರಿಯಾವನ್ನು ಅನುಸರಿಸಬೇಕು ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.