ನವದೆಹಲಿ: ವಿದೇಶಗಳೊಂದಿಗೆ ರಾಜತಾಂತ್ರಿಕ ಬಾಂಧವ್ಯ ವೃದ್ಧಿಗೆ ಪ್ರಯತ್ನಪಡುತ್ತಿರುವ ನರೇಂದ್ರ ಮೋದಿ ಸರ್ಕಾರ ತನ್ನ ವಿದೇಶಾಂಗ ನೀತಿಗಾಗಿ ನಾಗರಿಕರಿಂದ ಶಬ್ಬಾಸ್ಗಿರಿಯನ್ನೂ ಪಡೆದುಕೊಂಡಿದೆ.
ಮೋದಿ ಸರ್ಕಾರದ ಎರಡನೇ ವರ್ಷಾಚರಣೆ ನಿಮಿತ್ತ ನಡೆಸಲಾದ ಆನ್ಲೈನ್ ಸಮೀಕ್ಷೆಯಲ್ಲಿ, ಜನ ಕೇಂದ್ರದ ವಿದೇಶಾಂಗ ನೀತಿ ಮತ್ತು ರೈಲ್ವೇ ಆಧುನೀಕರಣ ಪ್ರಯತ್ನಕ್ಕೆ ಭೇಷ್ ಎಂದಿದ್ದು, ಪೂರ್ವಭಾವಿಯಾಗಿ ವಿದೇಶಾಂಗ ನೀತಿಯ ಮೂಲಕ ಸರ್ಕಾರ ಹೊಸ ವಿಶ್ವ ವ್ಯವಸ್ಥೆ ರಚಿಸುತ್ತಿದೆ ಎಂದು ಬಣ್ಣಿಸಿದ್ದಾರೆ.
MyGov ಪೋರ್ಟಲ್ ನಡೆಸಿದ ಒಂದು ತಿಂಗಳ ಸುಧೀರ್ಘ ಸರ್ವೇ ಗುರುವಾರ ಅಂತ್ಯಗೊಂಡಿದ್ದು, ಇದರಲ್ಲಿ 2.7 ಲಕ್ಷ ಜನ ಪಾಲ್ಗೊಂಡು ಸರ್ಕಾರಕ್ಕೆ ರೇಟಿಂಗ್ ನೀಡಿದ್ದಾರೆ.
ವಿವಿಧ ಸಚಿವಾಲಯಗಳ ಬಗ್ಗೆ ಜನ ನೀಡಿದ ರೇಟಿಂಗ್ನ ಅಂತಿಮ ಫಲಿತಾಂಶವನ್ನು ಪ್ರಧಾನಿ ಸಚಿವಾಲಯಕ್ಕೆ ಶೀಘ್ರದಲ್ಲೇ ಕಳುಹಿಸಿಕೊಡಲಾಗುತ್ತಿದೆ.
ವಿದೇಶಾಂಗ ನೀತಿ, ರೈಲ್ವೇ ಮತ್ತು ರಸ್ತೆಗಳ ವಲಯದಲ್ಲಿ ಆದ ಸಾಧನೆಗೆ ಉತ್ತಮ ಶ್ಲಾಘನೆ ದೊರೆತಿದೆ. ಎಚ್ಆರ್ಡಿ ಸಚಿವಾಲಯ ಈ ನಿಟ್ಟಿನಲ್ಲಿ ಕಳಪೆ ಸಾಧನೆ ಮಾಡಿದೆ ಎನ್ನಲಾಗಿದೆ.
ಸಂಪುಟ ಪುನಾರಚನೆಯಲ್ಲಿ ಈ ರೇಟಿಂಗ್ ಮಹತ್ವದ ಪಾತ್ರ ನಿಭಾಯಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.