ನವದೆಹಲಿ: ಆರ್ಎಸ್ಎಸ್ನ ವಿದೇಶಿ ವಿಭಾಗ ‘ಹಿಂದೂ ಸ್ವಯಂಸೇವಕ ಸಂಘ’ದ 50 ನೇ ವರ್ಷಾಚರಣೆಯ ನಿಮಿತ್ತ ಜುಲೈನಲ್ಲಿ ಯುಕೆನಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ಇದರಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾಗವಹಿಸಲಿದ್ದಾರೆ.
ಮೂಲಗಳ ಪ್ರಕಾರ ಆಸ್ಕರ್ ಪ್ರಶಸ್ತಿ ಪುರಷ್ಕೃತ ನಟ ಲಿಯನಾರ್ಡೊ ಡಿಕಾರ್ಪಿಯೋ ಮತ್ತು ವರ್ಜಿ ಗ್ರೂಪ್ ರಿಚರ್ಡ್ ಬ್ರಾನ್ಸನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾಗವತ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಜುಲೈ 29-31 ರಂದು ಹಿಂದೂ ಸ್ವಯಂಸೇವಕ್ ಸಂಘವು ಮೂರು ದಿನಗಳ ‘ಸಂಸ್ಕೃತಿ ಶಿವಿರ್’ನ್ನು ಆಯೋಜನೆ ಮಾಡುತ್ತಿದೆ. ಇದಕ್ಕೆ ಡಿಕಾರ್ಪಿಯೋ ಮತ್ತು ಬ್ರಾನ್ಸನ್ ಅವರಿಗೆ ಆಹ್ವಾನ ನೀಡಲಾಗಿದೆ.
ಭಾಗವತ್ ಅಲ್ಲದೇ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಹರ್ಟ್ಫೋರ್ಡ್ಶಿರೆ ಕಂಟ್ರಿ ಶೋನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದ್ದು, 2 ಸಾವಿರ ಹಿಂದೂಗಳು ಭಾಗವಹಿಸುವ ನಿರೀಕ್ಷೆ ಇದೆ.
ಆರ್ಎಸ್ಎಸ್ ಮುಖ್ಯಸ್ಥರಾದ ಬಳಿಕ ಭಾಗವತ್ ಅವರ ಆರನೇ ಯುಕೆ ಭೇಟಿ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.