ನವದೆಹಲಿ; ಯೋಗ ಎಂಬುದು ಮನಸ್ಸು ಮತ್ತು ದೇಹವನ್ನು ಹತೋಟಿಗೆ ತಂದು ಕ್ರಮಬದ್ಧ ಜೀವನ ನಡೆಸಲು ಇರುವ ಒಂದು ಪ್ರಾಚೀನ ಕಲೆ. ಗರ್ಭಿಣಿಯರು, ಮಕ್ಕಳು ಎಂಬ ಬೇಧವಿಲ್ಲದೆ ಯಾರೂಬೇಕಾದರೂ ಈ ಯೋಗವನ್ನು ಮಾಡಬಹುದು. ಆದರೆ ಅದಕ್ಕೆ ಪತರಿಣಿತರ ಮಾರ್ಗದರ್ಶನ ಅಗತ್ಯ.
ಜೂನ್ 21 ರಂದು ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಗುಜರಾತಿನ ರಾಜ್ಕೋಟ್ ನಗರದಲ್ಲಿ 1632 ಗರ್ಭಿಣಿಯರು ಯೋಗ ಪ್ರದರ್ಶನ ಮಾಡಿದ್ದು, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಗೆ ಸೇರಿದೆ.
ಈ ಹಿಂದೆ ಈ ದಾಖಲೆ ಚೀನಾದ ಪಾಲಾಗಿತ್ತು, ಅಲ್ಲಿ 900 ಗರ್ಭಿಣಿಯರು ಯೋಗ ಪ್ರದರ್ಶನ ಮಾಡಿದ್ದರು. ಇದೀಗ ಆ ದಾಖಲೆಯನ್ನು ಗುಜರಾತ್ ಮಹಿಳೆಯರು ಮುರಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.