ನವದೆಹಲಿ: ಜೂನ್ 23 ರಂದು ಅಂತಾರಾಷ್ಟ್ರೀಯ ವಿಧವಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಉಳಿದ ಅಂತಾರಾಷ್ಟ್ರೀಯ ದಿನಗಳಂತೆ ಈ ದಿನಕ್ಕೆ ಸರ್ಕಾರವಾಗಲಿ, ಜನರಾಗಲಿ ಹೆಚ್ಚಿನ ಮಹತ್ವವನ್ನು ನೀಡುವುದಿಲ್ಲ. ಕಾರಣ ವಿಧವೆಯರ ಕಾಳಜಿ ಹೆಚ್ಚಿನವರಿಗೆ ಇಲ್ಲದೇ ಇರುವುದು.
ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಲಕ್ಷಾಂತರ ವಿಧವೆಯರನ್ನು ಬೆಳಕಿನತ್ತ ತರಬೇಕು ಎಂಬ ಕಾರಣಕ್ಕಾಗಿಯೇ ಅಂತಾರಾಷ್ಟ್ರೀಯ ವಿಧವಾ ದಿನವನ್ನು ಆಚರಣೆ ಮಾಡಲಾಗುತ್ತಿದೆ.
2005 ರಲ್ಲಿ ಲೋಂಬಾ ಫೌಂಡೇಶನ್ ಆರಂಭಿಸಿದ ವಿಧವೆಯರ ಪರವಾದ ಅಭಿಯಾನದಿಂದಾಗಿ, 2010 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 23 ರನ್ನು ಅಂತಾರಾಷ್ಟ್ರೀಯ ವಿಧವಾ ದಿನವಾಗಿ ಘೋಷಿಸಲಾಯಿತು.
ಸಮಾಜದ ಮುಖ್ಯ ವಾಹಿನಿಯಿಂದ ತೆರೆಮರೆಗೆ ಸರಿಯುತ್ತಿರುವ ವಿಧವೆಯರನ್ನು ಮತ್ತೆ ಮುಖ್ಯವಾಹಿನಿಗೆ ಕರೆತರುವ ಸದುದ್ದೇಶ ಈ ದಿನದ ಹಿಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.