ಮಥುರಾ: ಹಲವಾರು ಸತ್ತ ದನಗಳನ್ನು ತುಂಬಿದ್ದ ಟ್ರಕ್ವೊಂದನ್ನು ಮಥುರಾದ ಚೌಮುಹಾ ಸಮೀಪ ನಿಲ್ಲಿಸಲಾಗಿದ್ದು, ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದೆ.
ಬುಧವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು ಆಕ್ರೋಶಿತ ಜನರು ಸತ್ತ ದನಗಳನ್ನು ಹೊರ ತೆಗೆದು ಟ್ರಕ್ಗೆ ಬೆಂಕಿ ಹಚ್ಚಿದರು.
ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ದೆಹಲಿ-ಆಗ್ರಾ ಹೈವೇಯನ್ನು ಬ್ಲಾಕ್ ಮಾಡಲಾಗಿದೆ.
10 ಚಕ್ರಗಳ ಟ್ರಕ್ ಇದಾಗಿದ್ದು, ಮಾರ್ಗ ಮಧ್ಯೆ ನಿಂತಿತ್ತು. ಹಲವು ಸಮಯದ ಬಳಿಕ ಇದರಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಕಂಡು ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ಅದರೊಳಗೆ 50 ರಿಂದ 60 ಸತ್ತ ದನಗಳಿದ್ದವು. ಇದು ಯಾರಿಗೆ ಸೇರಿದ ಟ್ರಕ್ ಎಂಬ ಬಗ್ಗೆ ಸುಳಿವು ಸಿಕ್ಕಿಲ್ಲ.
ಜನರು ಟ್ರಕ್ಗೆ ಬೆಂಕಿ ಹಚ್ಚಿದ ಪರಿಣಾಮ ಟ್ರಾಫಿಕ್ ಜಾಮ್ ಸಂಭವಿಸಿತು. ಬಳಿಕ ಜನ ಗುಂಪು ಸೇರಿ ಪರಿಸ್ಥಿತಿ ಹತೋಟಿ ಮೀರುವ ಲಕ್ಷಣ ಗೋಚರಿಸಿತು. ತಕ್ಷಣ ಆಗಮಿಸಿದ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.