ನವದೆಹಲಿ: ಖಾಸಗಿ ಎಫ್ಎಂ ಚಾನೆಲ್ಗಳಿಗೆ ಸುದ್ದಿಗಳನ್ನು ಪ್ರಸಾರ ಮಾಡುವ ಅನುಮತಿಯನ್ನು ನೀಡಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ನಿರ್ಧರಿಸಿದೆ.
ಆಲ್ ಇಂಡಿಯಾ ರೇಡಿಯೋದಿಂದ ಸುದ್ದಿಯನ್ನು ಪಡೆದು ತಮ್ಮ ರೇಡಿಯೋ ಚಾನೆಲ್ ಅವುಗಳು ಪ್ರಸಾರ ಮಾಡಬಹುದಾಗಿದೆ. ಆದರೆ ಇಂತಿಷ್ಟು ಸಮಯಕ್ಕೆ ಹಣವನ್ನೂ ಅದು ಪಾವತಿಸಬೇಕಾಗಿದೆ.
ಸುದ್ದಿಗಳನ್ನು ಬಿತ್ತರಿಸುವ ಅವಕಾಶವನ್ನು ನೀಡುವಂತೆ ಹಿಂದಿನಿಂದಲೂ ಖಾಸಗಿ ರೇಡಿಯೋ ಆಪರೇಟರ್ಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಮಾನವ ಸಂಪನ್ಮೂಲ ಮತ್ತು ಪರಿವೀಕ್ಷಕರ ಕೊರತೆಯಿಂದಾಗಿ ಅವರಿಗೆ ಆ ಅಧಿಕಾರವನ್ನು ನೀಡಲಾಗಿರಲಿಲ್ಲ.
ಐ&ಬಿ ಸಚಿವಾಲಯ ಎಫ್ಎಂ 3ನೇ ಹಂತದ ವಿಸ್ತರಣೆ ಅಡಿಯಲ್ಲಿ 92 ನಗರಗಳಲ್ಲಿ 266 ಖಾಸಗಿ ಎಫ್ಎಂ ರೇಡಿಯೋ ಚಾನೆಲ್ಗಳ 2ನೇ ತಂಡದ ಇ-ಹರಾಜಿಗೆ ಅರ್ಜಿ ಆಹ್ವಾನಿಸಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳ 14 ನಗರಗಳಲ್ಲಿ 36 ರೇಡಿಯೋ ಚಾನೆಲ್ಗಳಿಗೆ ವಿಶೇಷ ಪ್ರೋತ್ಸಾಹ ನೀಡಲು ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.