ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ)ಯ ಸಭೆಯಲ್ಲಿ ಪಾಲ್ಗೊಳ್ಳಲು ಇಂದು ಬೆಳಿಗ್ಗೆ ನವದೆಹಲಿಯಿಂದ ತಾಷ್ಕೆಂಟ್ಗೆ ತೆರಳಿದ್ದು, ಇದೀಗ ತಾಷ್ಕೆಂಟ್ ತಲುಪಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ವಿವಿಧ ರಾಷ್ಟ್ರಗಳ ಮುಖಂಡರನ್ನು ಭೇಟಿಯಾಗಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿಂಗ್ಪಿಂಗ್ ಅವರನ್ನೂ ಭೇಟಿ ಮಾಡಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರು ಭಾರತದ ಎನ್ಎಸ್ಜಿ ಸೇರ್ಪಡೆಯ ಕುರಿತು ಮಾತುಕತೆ ನಡೆಸಲಿದ್ದಾರೆ.
ಎಸ್ಸಿಒ ಗುಂಪಿನ ಒಂದು ಸದಸ್ಯ ಆಗಿರುವುದು ಸಂತಸ ತಂದಿದೆ. ಎಸ್ಸಿಜಿ ಮೂಲಕ ಆರ್ಥಿಕ ಸಹಕಾರ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಪಡೆಯುವ ಆಶಯವಿದೆ. ಭಾರತವು ಮಧ್ಯ ಏಷ್ಯಾ ರಾಷ್ಟ್ರಗಳ ಜೊತೆ ಆರ್ಥಿಕ ಮತ್ತು ನಾಗರಿಕ ಸಂಬಂಧಗಳನ್ನು ವಿಸ್ತರಿಸುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಶಾಂಘೈ ಸಹಕಾರ ಸಭೆಯು ಜೂನ್ 23 ಮತ್ತು 24 ರಂದು ತಾಷ್ಕೆಂಟ್ನಲ್ಲಿ ನಡೆಯಲಿದೆ.
ಆರು ಸದಸ್ಯ ರಾಷ್ಟ್ರಗಳ ಎಸ್ಸಿಜಿ ಬಣದಲ್ಲಿ ಭಾರತವನ್ನು ಸೇರಿಸುವ ಕುರಿತು ರಷ್ಯಾದ ಯುಫಾದಲ್ಲಿ 2015 ರಲ್ಲಿ ನಿರ್ಧರಿಸಲಾಗಿತ್ತು. ಎಸ್ಸಿಜಿ ಒಂದು ಪ್ರಾದೇಶಿಕ ಸಂಘಟನೆಯಾಗಿದ್ದು, ಚೀನಾ, ರಷ್ಯಾ, ಮಧ್ಯ ಏಷ್ಯಾದ ಗಣರಾಜ್ಯಗಳಾದ ಕಜಕಿಸ್ಥಾನ, ಉಜ್ಬೇಕಿಸ್ಥಾನ, ತಜಿಕಿಸ್ಥಾನ ಹಾಗೂ ಖರ್ಗಿಸ್ಥಾನ ರಾಷ್ಟ್ರಗಳು ಈ ಗುಂಪಿನಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.