ನವದೆಹಲಿ: ಜುಲೈ 1ರಿಂದ ಭಾರತೀಯ ರೈಲ್ವೇಯಲ್ಲಿ ಅತೀ ಮಹತ್ವದ ಕೆಲವೊಂದು ಬದಲಾವಣೆಗಳಾಗಲಿವೆ, ಇದು ಕೋಟ್ಯಾಂತರ ಪ್ರಯಾಣಿಕರ ಸುಗಮ ಪ್ರಯಾಣಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ.
ಅತೀ ಮಹತ್ವದ ಬದಲಾವಣೆಯೆಂದರೆ ತತ್ಕಾಲ್ ಟಿಕೆಟ್ ರಿಫಂಡ್ ಮತ್ತು ಟಿಕೆಟ್ ಖಚಿತತೆ ಸೌಲಭ್ಯ.
ಜುಲೈ1 ರಿಂದ ತತ್ಕಾಲ್ ಟಿಕೆಟ್ನ್ನು ರದ್ದುಗೊಳಿಸಿದ ಗ್ರಾಹಕರಿಗೆ ಅದರ ಶೇ.50ರಟು ಹಣ ವಾಪಾಸ್ ಸಿಗಲಿದೆ, ಅಲ್ಲದೇ ತತ್ಕಾಲ್ ಬುಕಿಂಗ್ ಟೈಮಿಂಗ್ ಕೂಡ ಬದಲಾವಣೆಯಾಗಲಿದೆ. AC ಕೋಚ್ ಬುಕಿಂಗ್ ಬೆಳಿಗ್ಗೆ 10ರಿಂದ 11ರವರೆಗೆ, ಸ್ಲೀಪರ್ ಕೋಚ್ 11ರಿಂದ 12 ಗಂಟೆಯವರೆಗೆ ಇರಲಿದೆ.
ಸುವಿಧಾ ರೈಲುಗಳಲ್ಲಿ ವೈಟಿಂಗ್ ಲಿಸ್ಟ್ ಇನ್ನು ಅಂತ್ಯಗೊಳ್ಳಲಿದೆ. ಖಚಿತ ಗ್ರಾಹಕರು ಮತ್ತು ಆರ್ಎಸಿ ಪ್ಯಾಸೆಂಜರ್ ಅಕಮಡೇಶನ್ಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ.
ರಾಜಧಾನಿ ಮತ್ತು ಶತಾಬ್ದಿಗಳ ಕೋಚ್ಗಳ ಸಂಖ್ಯೆ ಜುಲೈ 1ರಿಂದ ಎರಿಕೆಯಾಗಲಿದೆ.
ಟಿಕೆಟ್ ಬುಕಿಂಗ್ ವಿವಿಧ ಭಾಷೆಗಳಲ್ಲಿ ಜಾರಿಯಾಗಲಿದೆ. ಪ್ರಿಮಿಯಂ ಟ್ರೈನ್ಗಳು ಇರುವುದಿಲ್ಲ. ಸುವಿಧ ಟ್ರೈನ್ ಟಿಕೆಟ್ ರದ್ದುಗೊಳಿಸಿದರೆ ಅರ್ಧ ಹಣ ವಾಪಾಸ್ ದೊರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.