ನವದೆಹಲಿ: ತಾಷ್ಕೆಂಟ್ನಲ್ಲಿ ಎರಡು ದಿನಗಳ ಶಾಂಘೈ ಕೋ-ಅಪರೇಶನ್ ಮೀಟಿಂಗ್ ನಡೆಯಲಿದ್ದು, ಈ ವೇಳೆ ಗುರುವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾದ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಈ ವೇಳೆ ಅವರು ಭಾರತದ ಎನ್ಎಸ್ಜಿ ಸದಸ್ಯತ್ವದ ಪ್ರಯತ್ನಕ್ಕೆ ಬೆಂಬಲ ನೀಡುವಂತೆ ಅವರ ಮನವೊಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉಜಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್ನಲ್ಲಿ ನಡೆದ ಶಾಂತಿ ಒಪ್ಪಂದ ಭಾರತ-ಪಾಕಿಸಾಥನದ ನಡುವಣ ಯುದ್ಧವನ್ನು ಅಂತ್ಯಗೊಳಿಸಿತ್ತು. ಈ ಒಪ್ಪಂದ ಜರುಗಿ ಅರ್ಧ ಶತಮಾನಗಳ ಬಳಿಕ ಇದೀಗ ಅಲ್ಲಿ ಸೆಂಟ್ರಲ್ ಏಷ್ಯಾ ನಗರಗಳು ಮುಂದಿನ 48 ಗಂಟೆಗಳ ಕಾಲ ಅತೀ ಮಹತ್ವದ ರಾಜತಾಂತ್ರಿಕ ಚರ್ಚೆಯಲ್ಲಿ ತೊಡಗಲಿವೆ.
ಮೋದಿ ಗುರುವಾರ ಶಾಂಘೈ ಕೋ-ಅಪರೇಶನ್ ಮೀಟಿಂಗ್ನಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಸಂದರ್ಭ ಕ್ಷಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.