ರಿಯೋ: ಬ್ರೇಝಿಲ್ನ ಅಮೆಜಾನ್ ಸಮೀಪ ಸಂಚರಿಸಿದ ಒಲಿಂಪಿಕ್ ಜ್ಯೋತಿ ಕಾರ್ಯಕ್ರಮದಲ್ಲಿ ಬಳಸಲಾಗಿದ್ದ ಬಲು ಅಪರೂಪದ ಪ್ರಾಣಿ ಜಾಗ್ವಾರ್ನನ್ನು ಕಾರ್ಯಕ್ರಮ ಮುಗಿದ ಬಳಿಕ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಕ್ರಮದ ಬಳಿಕ ಜಾಗ್ವಾರ್ ಅದರ ನಿಯಂತ್ರಕರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿತ್ತು, ಅಲ್ಲದೇ ಜನರಿಗೆ ಇದು ಅಪಾಯವನ್ನು ಸೃಷ್ಟಿ ಮಾಡಬಹುದು ಎಂಬ ಭಯದಿಂದ ಗುಂಡಿಕ್ಕಿ ಕೊಲ್ಲಲಾಗಿದೆ. ಈ ವಿಷಯವನ್ನು ಬ್ರೆಝಿಲ್ ಮಿಲಿಟರಿ ಸ್ಪಷ್ಟಪಡಿಸಿದೆ.
ಈ ಜಾಗ್ವಾರ್ ಹೆಣ್ಣಾಗಿದ್ದು, 17 ವರ್ಷ ತುಂಬಿತ್ತು. ಜುಮಾ ಎಂಬ ಹೆಸರನ್ನು ಹೊಂದಿತ್ತು. ಒಲಿಂಪಿಕ್ ಜ್ಯೋತಿ ಕಾರ್ಯಕ್ರಮಕ್ಕಾಗಿ ಮಿಲಿಟರಿ ಮೃಗಾಲಯದಿಂದ ಇದನ್ನು ಕರೆತರಲಾಗಿತ್ತು. ಮರಿಯಿಂದಲೂ ಅದು ಅಲ್ಲೇ ಬೆಳೆದಿತ್ತು.
ಮೃಗಾಲಯದ ಮೂಲಕ ಒಲಿಂಪಿಕ್ ಜ್ಯೋತಿ ಸಂಚರಿಸಿದ ಕಾರಣ ಇದರಲ್ಲಿ ಪ್ರಾಣಿಗಳ ಬಳಕೆ ಮಾಡಲಾಗಿತ್ತು. ಜಾಗ್ವಾರ್ ಅಮೆಜಾನ್ನ ಅಪರೂಪದ ಪ್ರಾಣಿ ತಳಿಯಾಗಿದೆ. ಅಲ್ಲದೇ ಅಳಿವಿನ ಅಂಚಿನಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.