ಹೈದರಾಬಾದ್ : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಜೂನ್ 22 ರಂದು ಒಟ್ಟು 20 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆಗೊಳಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಬುಧವಾರ ಬೆಳಿಗ್ಗೆ 9.26 ಕ್ಕೆ ಸರಿಯಾಗಿ 20 ಸೆಟ್ಲೈಟ್ಗಳನ್ನು ಏಕ ಕಾರ್ಯಾಚರಣೆಯಲ್ಲಿ ಉಡಾವಣೆಗೊಳಿಸಿದೆ. ದೇಶ, ವಿದೇಶದ ರಕ್ಷಣೆ ವಾಣಿಜ್ಯದ ಕಾರ್ಟೊಸ್ಯಾಟ್-2 ಸೇರಿದಂತೆ ಒಟ್ಟು 20 ಉಪಗ್ರಹಗಳನ್ನೊಳಗೊಂಡ ಪಿಎಸ್ಎಲ್ವಿ-ಸಿ 34 ಯಶಸ್ವಿಯಾಗಿ ಕಕ್ಷೆಗೆ ತಲುಪಿದೆ.
725.5ಕಜಿ ತೂಕದ ಭೂ ಪರಿವೀಕ್ಷಣಾ ಉಪಗ್ರಹ ಕಾರ್ಟೊಸ್ಯಾಟ್-2 ನೊಂದಿಗೆ, ಗೂಗಲ್ ಮಾಲಿಕತ್ವದ ಟೆರಾ ಬೆಲ್ಲ ಮತ್ತು ನಾಸಾ ನೌಕರರ ಮಾಲಿಕತ್ವದ ಪ್ಲಾನೆಟ್ ಲ್ಯಾಬ್ಸ್ ಸೇರಿದಂತೆ ವಿವಿಧ ದೇಶಗಳ ಒಟ್ಟು 20 ಉಪಗ್ರಹಗಳನ್ನು ಹೊತ್ತು ಪಿಎಸ್ಎಲ್ವಿ ಸಾಗಿತು.
ಏಕಕಾಲಕ್ಕೆ ಅತೀ ಹೆಚ್ಚು ಉಪಗ್ರಹ ಹೊತ್ತೊಯ್ದ ಎರಡನೇ ರಾಷ್ಟ್ರ ಎಂಬ ಕೀರ್ತಿಗೆ ಪಾತ್ರವಾಗಿದೆ. 2008 ರಲ್ಲಿ ಇಸ್ರೋ ಒಂದೇ ರಾಕೆಟ್ ಮೂಲಕ 10 ಉಪಗ್ರಹಗಳನ್ನು ಉಡಾವಣೆಗೊಳಿಸಿತ್ತು. 34 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾಯಿಸಿದ ರಷ್ಯಾ ಮೊದಲನೇ ಸ್ಥಾನದಲ್ಲಿದೆ.
ಈ ಕಾರ್ಯಾಚರಣೆ ಭಾರತದ ಬಾಹ್ಯಾಕಾಶ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ, ಈಗಾಗಲೇ ಹಲವು ಪ್ರಥಮಗಳನ್ನು ಮಾಡಿ ತೋರಿಸಿರುವ ಇಸ್ರೋ ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಇದು ಇನ್ನಷ್ಟು ಉಪಗ್ರಹ ಯೋಜನೆಗಳನ್ನು ಇಸ್ರೋಗೆ ತಂದುಕೊಡುವ ಭರವಸೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.