ರಿಯೋ: 106 ವರ್ಷದ ವಯೋವೃದ್ಧೆ ಐಡ ಜೆಮಂಕ್ಯು ಕಳೆದ ಶನಿವಾರ (ಜೂನ್ 19) ದಂದು ಒಲಿಂಪಿಕ್ ಜ್ಯೋತಿ ಹಿಡಿದಿದ್ದು, ಈ ಮೂಲಕ ಒಲಿಂಪಿಕ್ ಜ್ಯೋತಿ ಹಿಡಿದ ಅತೀ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
2014ರ ವಿಂಟರ್ ಒಲಿಂಪಿಕ್ಸ್ನಲ್ಲಿ ಅಲೆಗ್ಸಾಂಡರ್ ಕಾಪ್ಟರೆಂಕೋ ಎಂಬ 101 ವರ್ಷದ ವ್ಯಕ್ತಿ ಒಲಿಂಪಿಕ್ ಜ್ಯೋತಿ ಹಿಡಿದು ದಾಖಲೆ ನಿರ್ಮಿಸಿದ್ದರು. ಆದರೀಗ ಆ ದಾಖಲೆಯನ್ನು ಐಡ ಮುರಿದಿದ್ದಾರೆ.
ಮೂರು ವರ್ಷಗಳ ಹಿಂದೆಯಷ್ಟೇ ಐಡ ಅತ್ಯಂತ ಹಿರಿಯ ಸ್ಕೈಡೈವರ್ ಎಂಬ ದಾಖಲೆ ನಿರ್ಮಿಸಿದ್ದರು.
ತನ್ನ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಆಕೆ, ಇಂತಹ ಕಾರ್ಯ ಮಾಡುತ್ತೇನೆಂದು ನಿರೀಕ್ಷೆಯೇ ಮಾಡಿರಲಿಲ್ಲ ಎಂದಿದ್ದಾರೆ.
95 ದಿನಗಳ ಜ್ಯೋತಿ ರ್ಯಾಲಿ ಬ್ರೆಝಿಲ್ನ 325 ನಗರಗಳಲ್ಲಿ ಸಂಚರಿಸಲಿದೆ, 12 ಸಾವಿರ ಓಟಗಾರರು ಇದರಲ್ಲಿ ಭಾಗವಹಿಸಲಿದ್ದಾರೆ. ಇದು ರಿಯೋದ ಮರಕಾನ ಸ್ಟೇಡಿಯಂನಲ್ಲಿ ಆಗಸ್ಟ್ 5 ರಂದು ಕೊನೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.