ನವದೆಹಲಿ; ಆರ್ಬಿಐ ಗವರ್ನರ್ ಆಗಿರುವ ರಘುರಾಮ್ ರಾಜನ್ ಅವರ ಅಧಿಕಾರಾವಧಿ ಮುಂದಿನ ಸೆಪ್ಟಂಬರ್ಗೆ ಅಂತ್ಯಗೊಳ್ಳಲಿದೆ. ಎರಡನೇ ಬಾರಿಗೆ ಅವರು ಆಯ್ಕೆಯಾಗುವುದಿಲ್ಲ ಎಂಬುದು ಈಗಾಗಲೇ ಖಚಿತವಾಗಿದೆ. ಹೀಗಾಗಿ ಸಮರ್ಥ ವ್ಯಕ್ತಿಯೊಬ್ಬನನ್ನು ಗವರ್ನರ್ ಆಗಿ ಆಯ್ಕೆ ಮಾಡಬೇಕಾದ ಮಹತ್ತರ ಜವಾಬ್ದಾರಿ ಸರ್ಕಾರದ ಮೇಲಿದೆ.
ಈ ಬಾರಿ ಆಯ್ಕೆ ಸಮಿತಿ ಆರ್ಬಿಐ ಗವರ್ನರ್ನ್ನು ಆಯ್ಕೆ ಮಾಡುವುದಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಅವರೇ ಗವರ್ನರ್ ಅವರನ್ನು ಆಯ್ಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜನ್ ಅವರ ಉತ್ತರಾಧಿಕಾರಿಯನ್ನು ಆದಷ್ಟು ಬೇಗ ಘೋಷಿಸಲು ಸರ್ಕಾರ ಉತ್ಸುಹುಕವಾಗಿದೆ. ಆರ್ಥಿಕ ಮತ್ತು ಮಾನಿಟರಿ ಪಾಲಿಸಿಯಲ್ಲಿ ತಜ್ಞರಾಗಿರುವ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎನ್ನಲಾಗಿದೆ.
ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್, ಆರ್ಬಿಐನ ಮಾಜಿ ಉಪ ಗವರ್ನರ್ ಸುಬೀರ್ ಗೋಕರ್ಣ, ರಾಕೇಶ್ ಮೋಹನ್ ಅವರುಗಳ ಹೆಸರು ಕೇಳಿ ಬರುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.