News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬ್ರೆಡ್‌ಗಳಲ್ಲಿ ಪೊಟಾಶಿಯಂ ಬ್ರೊಮೇಟ್ ಬಳಕೆ ನಿಷೇಧಿಸಿದ ಭಾರತ

bread

ನವದೆಹಲಿ: ಮಾರಕ ಕ್ಯಾನ್ಸರ್ ಕಾಯಿಲೆಯನ್ನು ಉಂಟು ಮಾಡುವ ಪೊಟಾಶಿಯಂ ಬ್ರೊಮೇಟ್‌ನ್ನು ಫುಡ್ ಎಡೆಕ್ಟಿವ್ ಆಗಿ ಬ್ರೆಡ್ ಮತ್ತು ಇತರ ತಿನಿಸುಗಳಲ್ಲಿ ಬಳಸುವುದನ್ನು ಭಾರತ ನಿಷೇಧಿಸಿದೆ.

ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್‌ಮೆಂಟ್ ಸ್ಟಡಿ ನಡೆಸಿದ ಅಧ್ಯಯನದಲ್ಲಿ ಪೊಟಾಶಿಯಂ ಬ್ರೊಮೇಟ್ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ ಎಂಬ ಅಂಶ ಪತ್ತೆಯಾಗಿತ್ತು. ಅಲ್ಲದೇ ಸಾಮಾನ್ಯವಾಗಿ ಲಭ್ಯವಾಗುವ 38 ಬ್ರ್ಯಾಂಡ್‌ಗಳ ಬ್ರೆಡ್‌ನಲ್ಲಿ ಇದನ್ನು ಬಳಸಲಾಗುತ್ತಿದೆ ಎಂದು ಅದು ಹೇಳಿತ್ತು.

ಈ ಹಿನ್ನಲೆಯಲ್ಲಿ ಆಹಾರ ಸುರಕ್ಷತಾ ನಿಯಂತ್ರಣ ಮಂಡಳಿ ವೈಜ್ಞಾನಿಕ ಮಂಡಳಿಗೆ ಇದರ ಪರಿಶೀಲನೆಯ ಜವಾಬ್ದಾರಿ ನೀಡಿತ್ತು. ಇದರ ವರದಿಯೂ ನಕಾರಾತ್ಮಕವಾಗಿ ಬಂದ ಹಿನ್ನಲೆಯಲ್ಲಿ ಅದರ ಬಳಕೆ ನಿಷೇಧಿಸುವಂತೆ ಶಿಫಾರಸ್ಸು ಮಾಡಿತ್ತು.

ಇದೀಗ ಬ್ರೆಡ್ ಮತ್ತು ಇತರ ತಿಂಡಿಗಳಲ್ಲಿ ಪೊಟಾಶಿಯಂ ಬ್ರೊಮೇಟ್ ಬಳಕೆಯನ್ನು ನಿಷೇಧಿಸುವಂತೆ ಸರ್ಕಾರದ ಆರೋಗ್ಯ ಸಚಿವಾಲಯ ಆದೇಶಿಸಿದೆ.

ಪಾವ್, ಬನ್‌ಗಳಲ್ಲೂ ಇದನ್ನು ಬಳಸಲಾಗುತ್ತಿತ್ತು, ಇದೀಗ ಅದರ ಬಳಕೆಯನ್ನು ಸಂಪೂರ್ಣ ನಿಲ್ಲಿಸುವಂತೆ ಸೂಚಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top