ಬೆಂಗಳೂರು: ಹೆಚ್ಚಿನ ಬಾರಿ ಅರ್ಜಿದಾರರು ಬರೆಯುವ ರೆಸ್ಯೂಮೆ ಕಳಪೆ ಮಟ್ಟದ್ದಾಗಿರುವುದರಿಂದ ಉದ್ಯೋಗ ಸಂದರ್ಶನಕ್ಕೆ ಅವಕಾಶ ಪಡೆಯಲು ವಿಫಲವಾಗುತ್ತವೆ.
ಆದರೆ ವಿಶ್ವದ ಅತ್ಯಂತ ಖ್ಯಾತಿಯ ಬ್ರಿಟಿಷ್ ಜಿಕ್ಯೂ ಮ್ಯಾಗಜಿನ್ ಬೆಂಗಳೂರಿನ 21 ವರ್ಷದ ಸುಮುಖ್ ಮೆಹ್ತಾನ ರೆಸ್ಯೂಮೆಗೆ ಪ್ರಭಾವಿತಗೊಂಡು ಸಂದರ್ಶನವಿಲ್ಲದೇ ನೇರ ನೇಮಕಾತಿ ಮಾಡಿದೆ. GQ ಮ್ಯಾಗಜಿನ್ ಸುಮುಖ್ನನ್ನು ಕಂಪೆನಿಯಲ್ಲಿ ಕೆಲಸ ಮಾಡಲು ಕರೆಯಿಸಿಕೊಂಡಿದೆ.
ಜೈನ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ವಿದ್ಯಾರ್ಥಿ ಸುಮುಖ್ ಮೆಹ್ತಾ ತನ್ನದೇ ಉದ್ಯಮ ’Your Pitch’ ಆರಂಭಿಸಿದ್ದು, ನೀರಸ ಅರ್ಜಿಗಳನ್ನು ಇನ್ಫೋ-ಗ್ರಾಫಿಕ್ಸ್ ಮೂಲಕ ಪ್ರಭಾವಶಾಲಿ ಅರ್ಜಿಗಳಾಗಿ ಪರಿವರ್ತಿಸುವ ಕಾರ್ಯದಲ್ಲಿ ತೊಡಗಿದ್ದರು.
ಮಹ್ತಾ ಕಲಿಯುತ್ತಿದ್ದ ವಿಶ್ವವಿದ್ಯಾಲಯದ ಡೀನ್ ಆತನಿಗೆ ಎಂಬಿಎ ಪದವೀಧರರ ರೆಸ್ಯೂಮೆಗಳನ್ನು ಆಕರ್ಷಕ ರೆಸ್ಯೂಮೆಗಳಾಗಿ ಪರಿವರ್ತಿಸಲು ಸೂಚಿಸಿದ್ದರು. ಈ ಸಂದರ್ಭ ಮೆಹ್ತಾ ಸುಮಾರು 160 ಇನ್ಫೋ-ಗ್ರಾಫಿಕ್ಸ್ ರೆಸ್ಯೂಮೆಗಳನ್ನು ರಚಿಸಿದ್ದಾರೆ. ಮೊದಲಿನಿಂದಲೂ GQ ಮ್ಯಾಗಜಿನ್ ಅಲ್ಲಿ ಕೆಲಸ ಪಡೆಯಬೇಕೆಂಬ ಇಚ್ಛೆ ಇದ್ದ ಮೆಹ್ತಾ, GQ ಮ್ಯಾಗಜಿನ್ಗೆ ತನ್ನದೇ ಇನ್ಫೋ-ಗ್ರಾಫಿಕ್ಸ್ ರೆಸ್ಯೂಮೆ ಸಲ್ಲಿಸಿದರು.
ಸುಮಾರು 20 ಪುಟಗಳನ್ನು ಹೊಂದಿರುವ ಈ ರೆಸ್ಯೂಮೆ GQ ಮ್ಯಾಗಜೀನ್ ಹೋಲುವಂತೇ ಇದೆ. ಪ್ರತಿ ವಿಷಯಗಳನ್ನು ಅದರಲ್ಲಿ ಸವಿವರವಾಗಿ ಚಿತ್ರಗಳ ಮೂಲಕ ತಯಾರು ಮಾಡಲಾಗಿದೆ. ಇದರಿಂದ ಪ್ರಭಾವಿತರಾದ GQ ಮ್ಯಾಗಜಿನ್ ಪ್ರಧಾನ ಸಂಪಾದಕರು ಸುಮುಖ್ ಮೆಹ್ತಾಗೆ ಸಂದರ್ಶನವಿಲ್ಲದೆ GQ ಮ್ಯಾಗಜಿನ್ ಕಂಪೆನಿಯಲ್ಲಿ ಕೆಲಸ ಮಾಡಲು ಪ್ರಸ್ತಾಪವನ್ನಿತ್ತಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಏನನ್ನಾದರೂ ಸಾಧಿಸಲು ಕ್ರಿಯಾತ್ಮಕವಾಗಿರುವುದು ಅಗತ್ಯ ಎಂದು ಸುಮುಖ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.