ನವದೆಹಲಿ: ವಿಸ್ತರಣಾ ವಾದದಲ್ಲಿ ಅತೀವ ಆಸಕ್ತಿ ಹೊಂದಿರುವ ಕಮ್ಯೂನಿಷ್ಟ್ ರಾಷ್ಟ್ರ ಚೀನಾ ಪದೇ ಪದೇ ಭಾರತದ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ.
ಇತ್ತೀಚಿಗೆ ಭಾರತ-ಚೀನಾ ಅಂತಾರಾಷ್ಟ್ರೀಯ ಗಡಿಯಲ್ಲಿ ಚೀನಾದ ಫೈಟರ್-ಬಾಂಬರ್ ಜೆಟ್ ಅಕಸಿ ಚಿನ್ ಭಾರತದ ವಾಯು ಪ್ರದೇಶದ ಒಳನುಸುಳಿ ಗಡಿ ಉಲ್ಲಂಘನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಈ ಜೆಟ್ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಗೆ ಸೇರಿದ್ದಾಗಿದೆ, ಸುಮಾರು ೧೦೭ ನಿಮಿಷಗಳ ಕಾಲ ಇದು ಭಾರತದ ವಾಯು ಪ್ರದೇಶದಲ್ಲಿ ಹಾರಾಟ ನಡೆಸಿ ಬಳಿಕ ವಾಪಾಸ್ ಹೋಗಿದೆ ಎನ್ನಲಾಗಿದೆ.
ಈ ಹಿಂದೆಯೂ ಹಲವು ಬಾರಿ ಚೀನಾ ವಿಮಾನಗಳು ಭಾರತದ ವಾಯುಪ್ರದೇಶದಲ್ಲಿ ಹಾರಾಟ ನಡೆಸಿವೆ. ಈ ಹಿಂದೆ ಇದೇ ರೀತಿ ಪ್ರವೇಶಿಸಿ ಫೂಟ್ ಕ್ಯಾನ್, ಸಿಗರೇಟ್ ಪ್ಯಾಕ್ಗಳನ್ನು ಕೆಳಕ್ಕೆ ಹಾಕಿದ ಉದಾಹರಣೆಗಳೂ ಇವೆ.
ಜೂನ್ 9 ರಂದು ಅರುಣಾಚಲ ಪ್ರದೇಶದಲ್ಲಿ ಚೀನಾ ಪಡೆಗಳು ಗಡಿ ಅತಿಕ್ರಮಣ ಮಾಡಿ ದೊಡ್ಡ ಸುದ್ದಿ ಮಾಡಿದ್ದವು. ಇದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.