ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಅತೀ ಬಲಿಷ್ಠ ಏರ್ ಇಂಡಿಯಾ ಒನ್ ವಿಮಾನವನ್ನು ಹೊಂದಲಿದ್ದಾರೆ. ಇದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಬಳಿ ಇರುವ ಏರ್ಫೋರ್ಸ್ ಒನ್ ಏರ್ಕ್ರಾಫ್ಟ್ಗೆ ಸಮಾನವಾಗಿರಲಿದೆ.
ಈ ವಿಮಾನ ಬೋಯಿಂಗ್ 777-300ಗೆ ಅಪ್ಗ್ರೇಡ್ ಆಗಲಿದ್ದು, ನೂತನ ತಂತ್ರಜ್ಞಾನ ಇದರಲ್ಲಿ ಇರಲಿದೆ. ಕ್ಷಿಪಣಿಗಳ ದಾಳಿ, ರಾಕೆಟ್ ದಾಳಿಯನ್ನು ತಡೆಯುವ ಸಾಮರ್ಥ್ಯ ಇದಕ್ಕಿರಲಿದೆ.
ಜೂನ್ 25ರಂದು ನಡೆಯಲಿರುವ ರಕ್ಷಣಾ ಖರೀದಿ ಸಮಿತಿಯ ಸಭೆಯಲ್ಲಿ ಸಚಿವ ಮನೋಹರ್ ಪರಿಕ್ಕರ್ ಅವರು, ಎರಡು ಬೋಯಿಂಗ್ 777-300 ಒಪ್ಪಂದವನ್ನು ಅಂತಿಮಗೊಳಿಸಲಿದ್ದಾರೆ.
ಈ ಏರ್ಇಂಡಿಯಾ ಒನ್ ವಿಮಾನದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಮ್ಯೂನಿಕೇಶನ್ ತಂತ್ರಜ್ಞಾನ ಇರಲಿದ್ದು, ಪ್ರಧಾನಿಗೆ ಅತೀ ಹೆಚ್ಚಿನ ಭದ್ರತೆಯನ್ನು ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.