ಚಂಡೀಗಢ: ಎರಡನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಚಂಡೀಗಢದಲ್ಲಿ ಬೃಹತ್ ಯೋಗ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ 30 ಸಾವಿರ ಮಂದಿಯೊಂದಿಗೆ ವಿವಿಧ ಯೋಗ ಭಂಗಿಗಳನ್ನು ಮೋದಿ ಪ್ರದರ್ಶಿಸಿದರು.
ಪಾಪಿಟಲ್ ಕಾಂಪ್ಲೆಕ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ’ಈ ದಿನ ಉತ್ತಮ ಆರೋಗ್ಯದೊಂದಿಗೆ ಲಿಂಕ್ ಆಗಿದೆ, ಯೋಗ ಇಂದು ಸಾರ್ವಜನಿಕ ಚಳುವಳಿಯಾಗಿ ರೂಪುಗೊಂಡಿದೆ’ ಎಂದರು.
ಇಡೀ ಜಗತ್ತೇ ಯೋಗ ದಿನಾಚರಣೆಗೆ ಬೆಂಬಲ ನೀಡಿದ್ದು, ಸಮಾಜದ ಎಲ್ಲಾ ವರ್ಗದಿಂದಲೂ ಬೆಂಬಲ ದೊರೆತಿದೆ ಎಂದರು. ಅಲ್ಲದೇ ಯೋಗವನ್ನು ವಿಶ್ವದಾದ್ಯಂತ ಪ್ರಚಾರ ಮಾಡುವಂತೆ ಜನರಿಗೆ ಕರೆ ನೀಡಿದ ಅವರು, ಉತ್ತಮ ಯೋಗ ಶಿಕ್ಷಕರನ್ನು ತಯಾರಿಸುವ ಅಗತ್ಯವಿದೆ ಎಂದು ಸಾರಿದರು.
ಯೋಗ ಬಡವ, ಶ್ರೀಮಂತರ ನಡುವೆ ತಾರತಮ್ಯ ಮಾಡಲ್ಲ ಎಂದ ಅವರು, ಗರ್ಭಿಣಿಯರಿಗೂ ವೈದ್ಯರು ಯೋಗ ಮಾಡುವ ಸಲಹೆ ನೀಡುತ್ತಿದ್ದಾರೆ. ಯೋಗ ಎಂಬುದು ನಾವು ಏನು ಪಡೆಯುತ್ತೇವೆ ಎಂಬುದಲ್ಲ, ನಾವು ಏನು ನೀಡುತ್ತೇವೆ ಎಂಬುದು ಎಂದರು.
ಮುಂದಿನ ವರ್ಷದಿಂದ ಯೋಗಕ್ಕೆ ಕೊಡುಗೆ ನೀಡುತ್ತಿರುವವರಿಗಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಎರಡು ಪ್ರಶಸ್ತಿಗಳನ್ನು ನೀಡುವುದಾಗಿ ಅವರು ಘೋಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.